alex Certify ಗಮನಿಸಿ: ಎಟಿಎಂ ಕಾರ್ಡ್ ಗೆ RBI ತಂದಿದೆ ಹೊಸ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಎಟಿಎಂ ಕಾರ್ಡ್ ಗೆ RBI ತಂದಿದೆ ಹೊಸ ನಿಯಮ

RBI's 3 major rules for ATM card; follow these to prevent financial losses

ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಮೋಸ ಹೆಚ್ಚಾಗ್ತಿದೆ. ಇದನ್ನು ತಪ್ಪಿಸಲು ಆರ್.ಬಿ.ಐ. ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಡೆಬಿಟ್ ಕಾರ್ಡ್, ಅಂತರಾಷ್ಟ್ರೀಯ ವ್ಯವಹಾರ ಮತ್ತು ಆನ್ಲೈನ್ ವಹಿವಾಟು, ಸಂಪರ್ಕವಿಲ್ಲದ ಕಾರ್ಡ್ ನಿಯಮದಲ್ಲಿ ಬದಲಾವಣೆ ತಂದಿದೆ. ಹೊಸ ನಿಯಮ ಅಕ್ಟೋಬರ್ ಒಂದರಿಂದ ಜಾರಿಗೆ ಬಂದಿದೆ.

ಹೊಸ ಮಾರ್ಗಸೂಚಿ ಪ್ರಕಾರ, ಗ್ರಾಹಕರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಲಿಮಿಟ್ ಸೆಟ್ ಮಾಡಬೇಕು. ಗ್ರಾಹಕರಿಗೆ ಎಟಿಎಂ, ಪಿಒಎಸ್ ಮಶಿನ್ ಹಾಗೂ ಆನ್ಲೈನ್ ಹಣ ವರ್ಗಾವಣೆ ಅಥವಾ ಆನ್ಲೈನ್ ಖರೀದಿಗೆ ಸಂಬಂಧಿಸಿದಂತೆ ಮಿತಿ ನಿಗದಿಪಡಿಸಬೇಕು. ಈ ಮಿತಿಯನ್ನು ನೀವು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಎಟಿಎಂಗೆ ಹೋಗಿ ನೀವು ಸೆಟ್ ಮಾಡಬೇಕು.

ಬೇರೆ ದೇಶದಲ್ಲಿ ಕಾರ್ಡ್ ಮಾಡಿಸಲು ಬಯಸಿದ್ರೆ ಗ್ರಾಹಕ ಈ ಬಗ್ಗೆ ಬ್ಯಾಂಕ್ ಅನುಮತಿ ಪಡೆಯಬೇಕಾಗುತ್ತದೆ. ಕಾರ್ಡ್ ದುರುಪಯೋಗ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ಕಾರ್ಡ್ ಪಡೆಯುವವರು ಪ್ರತಿ ಸೇವೆಗೂ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾರ್ಡ್ ಕೇವಲ ಎಟಿಎಂ ಹಾಗೂ ಪಿಒಎಸ್ ಮಶಿನ್ ಬಳಕೆಗೆ ಮಾತ್ರ ಲಭ್ಯವಾಗಲಿದೆ. ಹೆಚ್ಚಿನ ಸೇವೆ ಬೇಕೆಂದ್ರೆ ಅರ್ಜಿ ಸಲ್ಲಿಸಬೇಕು.

ವಹಿವಾಟಿನ ಸಮಯದಲ್ಲಿ, ಅನೇಕ ಅಂತರರಾಷ್ಟ್ರೀಯ ಇ-ಕಾಮರ್ಸ್ ವೆಬ್ ‌ಸೈಟ್‌ಗಳು ಸಿವಿವಿ ಪಿನ್ ಕೇಳುವುದಿಲ್ಲ. ವಹಿವಾಟು ದೃಢೀಕರಣಕ್ಕಾಗಿ ಗ್ರಾಹಕರಿಗೆ ಒನ್ ಟೈಮ್ ಪಾಸ್ ವರ್ಡ್  ಕಳುಹಿಸುವುದಿಲ್ಲ. ಈ ಪರಿಸ್ಥಿತಿಯಲ್ಲಿ ಅತಿಯಾದ ಖರ್ಚಿನ ಅಪಾಯವಿದೆ. ಆರ್‌ಬಿಐನ ಈ ಹೊಸ ನಿಯಮದ ನಂತ್ರ ಅಂತರರಾಷ್ಟ್ರೀಯ ಬಳಕೆ ನಿರ್ಬಂಧಿಸಲ್ಪಡುತ್ತದೆ. ಕಾರ್ಡ್ ದುರುಪಯೋಗವಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...