alex Certify ದೇಶಾದ್ಯಂತ 2000 ರೂ. ಚಲಾವಣೆ ಸ್ಥಗಿತ: ನಿಮ್ಮಲ್ಲಿ 2 ಸಾವಿರ ರೂ. ನೋಟುಗಳಿದ್ದರೆ ಹೀಗೆ ಬದಲಾವಣೆ ಮಾಡಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಾದ್ಯಂತ 2000 ರೂ. ಚಲಾವಣೆ ಸ್ಥಗಿತ: ನಿಮ್ಮಲ್ಲಿ 2 ಸಾವಿರ ರೂ. ನೋಟುಗಳಿದ್ದರೆ ಹೀಗೆ ಬದಲಾವಣೆ ಮಾಡಿಕೊಳ್ಳಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿದೆ. ಮೇ 23 ರಿಂದ ನೋಟು ಬದಲಿಸಿಕೊಳ್ಳಲು ಆರ್‌ಬಿಐ ಅವಕಾಶ ಕಲ್ಪಿಸಿದೆ.

ಈ ಕುರಿತಾಗಿ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಈ ಮೂಲಕ ದೇಶಾದ್ಯಂತ 2000 ರೂ. ನೋಟು ಬ್ಯಾನ್ ಮಾಡಲಾಗಿದೆ. ಸೆಪ್ಟೆಂಬರ್ 30ರ ನಂತರ 2000 ರೂ. ನೋಟು ಚಲಾವಣೆಯಲ್ಲಿ ಇರುವುದಿಲ್ಲ.

2000 ರೂ. ನೋಟು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. 2016 ರ ನವೆಂಬರ್ ನಲ್ಲಿ 2000 ರೂ. ನೋಟು ಚಲಾವಣೆಗೆ ತರಲಾಗಿತ್ತು. 2018ರಲ್ಲಿ 2000 ರೂ. ನೋಟು ಮುದ್ರಣವನ್ನು ಆರ್ಬಿಐ ಸ್ಥಗಿತಗೊಳಿಸಿತ್ತು.

ಈಗ 2,000 ರೂ. ನೋಟು ಚಲಾವಣೆಯನ್ನು ಆರ್‌ಬಿಐ ಹಿಂಪಡೆದುಕೊಂಡಿದ್ದು ನೋಟು ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಅವಕಾಶ ಕಲ್ಪಿಸಿದೆ. ಬ್ಯಾಂಕುಗಳಿಗೆ ತೆರಳಿ 2000 ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಮೇ 23ರ ನಂತರ ಬ್ಯಾಂಕುಗಳಿಗೆ ಹೋಗಿ ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಒಮ್ಮೆಗೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ, 2023ರ ಸೆಪ್ಟಂಬರ್ 30ರವರೆಗೆ 2000 ನೋಟುಗಳನ್ನು ಡಿಪಾಸಿಟ್ ಮಾಡಬಹುದು, ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡಲು ಆರ್‌ಬಿಐ ಗ್ರಾಹಕರಿಗೆ ಅವಕಾಶ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...