ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇನ್ನೂ 25 ಬಿಪಿಎಸ್ ದರ ಕಡಿತಗೊಳಿಸಬಹುದು ಎಂದು ಹಣಕಾಸು ತಜ್ಞರು ಹೇಳಿದ್ದಾರೆ. ವಿತ್ತೀಯ ನೀತಿ ಸಮಿತಿ ಈ ಹಿಂದೆ ಪಾಲಿಸಿ ರೆಪೋ ದರವನ್ನು 115 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿತ್ತು.
ಮುಂಬರುವ ಹಣಕಾಸು ನೀತಿ ಪರಿಶೀಲನೆ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಕನಿಷ್ಠ 25 ಬೇಸಿಸ್ ಪಾಯಿಂಟ್ ಗಳಿಗೆ ಪ್ರಮುಖ ಸಾಲ ದರಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಕೊರೊನಾ ವೈರಸ್ ನಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಕೊರೊನಾ ಪೀಡಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಅಗತ್ಯವು ಹಣದುಬ್ಬರದಲ್ಲಿ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತಿದೆ.
ಆರ್ಬಿಐ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿ ಆಗಸ್ಟ್ 4 ರಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದ್ದು, ಆಗಸ್ಟ್ 6ರಂದು ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಕೊರೊನಾ ಸಾಂಕ್ರಾಮಿಕ ರೋಗ ಮತ್ತು ನಂತರದ ಲಾಕ್ ಡೌನ್ ಗಳಿಂದ ಆರ್ಥಿಕತೆಗೆ ಉಂಟಾಗಿರುವ ಹಾನಿ ಮನಗಂಡು ಕೇಂದ್ರೀಯ ಬ್ಯಾಂಕ್ ಪೂರ್ವಭಾವಿ ಆರ್ಥಿಕ ಹಾನಿ ತಡೆಗೆ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಅನುಗುಣವಾಗಿ ಕನಿಷ್ಠ 25 ಬಿಪಿಎಸ್ ಪಾಯಿಂಟ್ ಗಳಷ್ಟು ಪ್ರಮುಖ ಸಾಲದ ದರವನ್ನು ಕಡಿತಗೊಳಿಸಬಹುದು ಎಂದು ಹೇಳಲಾಗಿದೆ.