alex Certify ಸಾಲ ಪಡೆದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಮತ್ತೊಂದು ಭರ್ಜರಿ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಪಡೆದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಮತ್ತೊಂದು ಭರ್ಜರಿ ಸಿಹಿ ಸುದ್ದಿ

ನವದೆಹಲಿ: ಮೇ 17 ರವರೆಗೆ ಲಾಕ್ ಡೌನ್ ಮುಂದುವರಿಕೆಯಾಗಿರುವ ಹಿನ್ನಲೆಯಲ್ಲಿ ಇನ್ನೂ ಮೂರು ತಿಂಗಳು ಇಎಂಐ ಪಾವತಿ ಮುಂದೂಡಿಕೆ ಮಾಡಲು ಭಾರತೀಯ ರಿಸರ್ಸ್ ಬ್ಯಾಂಕ್ ಚಿಂತನೆ ನಡೆಸಿದೆ.

ಲಾಕ್ ಡೌನ್ ಜಾರಿ ಮಾಡಿದ್ದರಿಂದ ಈಗಾಗಲೇ 3 ತಿಂಗಳು ಇಎಂಐ ಪಾವತಿಸುವುದನ್ನು ಮುಂದೂಡಲಾಗಿದ್ದು, ಮತ್ತೆ 3 ತಿಂಗಳು ಇಎಂಐ ಪಾವತಿ ಮುಂದೂಡಿಕೆ ಮಾಡಲಾಗುವುದು ಎನ್ನಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತಾಗಿ ಚರ್ಚೆ ನಡೆಸಿದ್ದು, ಬ್ಯಾಂಕ್ ಗಳಿಂದಲೂ ಇಎಂಐ ಮುಂದೂಡಿಕೆ ಮಾಡಲು ಸಮ್ಮತಿ ಸಿಕ್ಕಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಆಗಬೇಕಿದೆ. ಇದಿನ್ನೂ ಚರ್ಚೆಯ ಹಂತದಲ್ಲಿದ್ದು, ಶೀಘ್ರವೇ ಈ ಬಗ್ಗೆ ಮಾಹಿತಿ ನೀಡಲಾಗುವುದು.

ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಮತ್ತೆ ರಿಲೀಫ್ ನೀಡಲು ಆರ್.ಬಿ.ಐ. ಕ್ರಮಕೈಗೊಂಡಿದೆ. ಈ ಕುರಿತಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...