ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದೆ. ಈ ಏರಿಕೆಯೊಂದಿಗೆ ರೆಪೊ ದರವನ್ನು 5.9% ಗೆ ಹೆಚ್ಚಿಸಿದೆ. ಇದು ಸತತ ನಾಲ್ಕನೇ ಏರಿಕೆಯಾಗಿದೆ.
ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ತಡೆಯಲು ವಿದೇಶಿ ಬಂಡವಾಳದ ಒಳಹರಿವು ಸುಧಾರಿಸಲು ಬಡ್ಡಿದರದಲ್ಲಿ 50 ಬೇಸಿಸ್ ಪಾಯಿಂಟ್ ಗಳ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ವಾಹನ, ಗೃಹ, ಇತರೆ ಸಾಲಗಳ ಕಂತು, ಇಎಂಐ ಏರಿಕೆಯಾಗಲಿದೆ.
RBI ಗವರ್ನರ್ ಶಕ್ತಿಕಾಂತ ದಾಸ್ ಅವರು, ತಕ್ಷಣದಿಂದ ಜಾರಿಗೆ ಬರುವಂತೆ 50 ಬೇಸಿಸ್ ಪಾಯಿಂಟ್ ಗಳಿಂದ 5.9% ಗೆ ಪಾಲಿಸಿ ರೆಪೋ ದರವನ್ನು ಹೆಚ್ಚಿಸಲಾಗಿದೆ ಎಂದು ಘೋಷಿಸಿದರು.
ಸ್ಥಾಯಿ ಠೇವಣಿ ಸೌಲಭ್ಯ(SDF) ದರವನ್ನು 5.65% & MSF(ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ) ಮತ್ತು ಬ್ಯಾಂಕ್ ದರ 6.15% ಗೆ ಹೊಂದಿಸಲಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿಜವಾದ ಜಿಡಿಪಿ ಬೆಳವಣಿಗೆಯು ನಿರೀಕ್ಷೆಗಿಂತ ಕಡಿಮೆಯಾಗಿದೆ. ಅದೇನೇ ಇದ್ದರೂ ಅದು 13.5% ಮತ್ತು ಬಹುಶಃ ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ ಎಂದು ತಿಳಿಸಿದ್ದಾರೆ.