alex Certify ಬ್ಯಾಂಕ್ ಗಳಿಗೆ ನೆಮ್ಮದಿ ಸುದ್ದಿ ನೀಡಿದ RBI: ಸ್ವಯಂ ಪಾವತಿ ದೃಢೀಕರಣದ ಗಡುವು ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗಳಿಗೆ ನೆಮ್ಮದಿ ಸುದ್ದಿ ನೀಡಿದ RBI: ಸ್ವಯಂ ಪಾವತಿ ದೃಢೀಕರಣದ ಗಡುವು ವಿಸ್ತರಣೆ

ಬ್ಯಾಂಕ್ ಗಳಿಗೆ ಆರ್.ಬಿ.ಐ. ನೆಮ್ಮದಿ ಸುದ್ದಿ ನೀಡಿದೆ. ಆಟೋ ಡೆಬಿಟ್ ನಿಯಮದಲ್ಲಿ ಬದಲಾವಣೆ ಮಾಡಿದ್ದ ಆರ್.ಬಿ.ಐ. ಹೊಸ ನಿಯಮ ಜಾರಿಗೆ ತರಲು ಬ್ಯಾಂಕ್ ಗಳಿಗೆ ಮಾರ್ಚ್ 31ರವರೆಗೆ ಅವಕಾಶ ನೀಡಿತ್ತು. ಆದ್ರೆ ಈ ಗಡುವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 31ರವರೆಗೆ ಆರ್.ಬಿ.ಐ. ಅವಕಾಶ ನೀಡಿದೆ.

ಆಟೋ ಪೇಮೆಂಟ್ ಕುರಿತು ಆರ್‌ಬಿಐ ನಿರ್ದೇಶನವನ್ನು ಅನುಸರಿಸಲು ಬ್ಯಾಂಕುಗಳು ಮತ್ತು ಪಾವತಿ ಗೇಟ್‌ವೇಗಳು ಹೆಚ್ಚುವರಿ ಸಮಯವನ್ನು ಕೇಳಿದ್ದವು. ಇದಕ್ಕೆ ಆರ್.ಬಿ.ಐ. ಅವಕಾಶ ನೀಡಿದೆ.

ಈ ಹಿಂದೆ ಆರ್.ಬಿ.ಐ., ಎಎಫ್‌ಎ ಕಡ್ಡಾಯಗೊಳಿಸಲು ಮಾರ್ಚ್ 31ರವರೆಗೆ ಅವಕಾಶ ನೀಡಿತ್ತು. ಡಿಸೆಂಬರ್ 4 ರಂದೇ ಆರ್.ಬಿ.ಐ. ಈ ಬಗ್ಗೆ ಮಾಹಿತಿ ನೀಡಿತ್ತು. ಹೊಸ ನಿಯಮದ ಪ್ರಕಾರ, ಪಾವತಿಯನ್ನು ಕಡಿತಗೊಳಿಸುವ 5 ದಿನಗಳ ಮೊದಲು ಬ್ಯಾಂಕುಗಳು ಗ್ರಾಹಕರಿಗೆ ಅಧಿಸೂಚನೆಯನ್ನು ಕಳುಹಿಸಬೇಕು. ಗ್ರಾಹಕರು ಅದನ್ನು ಅನುಮೋದಿಸಿದ ನಂತರವೇ ಹಣ ಕಡಿತವಾಗಲಿದೆ. 5,000 ರೂಪಾಯಿಗಿಂತ ಹೆಚ್ಚಿನ ಪೇಮೆಂಟ್ ಗೆ ಬ್ಯಾಂಕುಗಳು ಗ್ರಾಹಕರಿಗೆ ಒನ್-ಟೈಮ್ ಪಾಸ್ವರ್ಡ್ ಕಳುಹಿಸಬೇಕಾಗುತ್ತದೆ.

ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ, ಟಾಟಾ ಪವರ್ ಮತ್ತು ಬಿಎಸ್‌ಇಎಸ್ ಮುಂತಾದ ಕಂಪನಿಗಳ ಮೇಲೆ ಇದು ಪರಿಣಾಮ ಬೀರಲಿದೆ. ಅನೇಕ ಬ್ಯಾಂಕ್ ಗಳಲ್ಲಿ ಹೊಸ ನಿಯಮ ಜಾರಿಗೆ ತರಲು ಸೌಲಭ್ಯಗಳಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...