ಬ್ಯಾಂಕ್ ಗಳಿಗೆ ಆರ್.ಬಿ.ಐ. ನೆಮ್ಮದಿ ಸುದ್ದಿ ನೀಡಿದೆ. ಆಟೋ ಡೆಬಿಟ್ ನಿಯಮದಲ್ಲಿ ಬದಲಾವಣೆ ಮಾಡಿದ್ದ ಆರ್.ಬಿ.ಐ. ಹೊಸ ನಿಯಮ ಜಾರಿಗೆ ತರಲು ಬ್ಯಾಂಕ್ ಗಳಿಗೆ ಮಾರ್ಚ್ 31ರವರೆಗೆ ಅವಕಾಶ ನೀಡಿತ್ತು. ಆದ್ರೆ ಈ ಗಡುವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 31ರವರೆಗೆ ಆರ್.ಬಿ.ಐ. ಅವಕಾಶ ನೀಡಿದೆ.
ಆಟೋ ಪೇಮೆಂಟ್ ಕುರಿತು ಆರ್‌ಬಿಐ ನಿರ್ದೇಶನವನ್ನು ಅನುಸರಿಸಲು ಬ್ಯಾಂಕುಗಳು ಮತ್ತು ಪಾವತಿ ಗೇಟ್‌ವೇಗಳು ಹೆಚ್ಚುವರಿ ಸಮಯವನ್ನು ಕೇಳಿದ್ದವು. ಇದಕ್ಕೆ ಆರ್.ಬಿ.ಐ. ಅವಕಾಶ ನೀಡಿದೆ.
ಈ ಹಿಂದೆ ಆರ್.ಬಿ.ಐ., ಎಎಫ್‌ಎ ಕಡ್ಡಾಯಗೊಳಿಸಲು ಮಾರ್ಚ್ 31ರವರೆಗೆ ಅವಕಾಶ ನೀಡಿತ್ತು. ಡಿಸೆಂಬರ್ 4 ರಂದೇ ಆರ್.ಬಿ.ಐ. ಈ ಬಗ್ಗೆ ಮಾಹಿತಿ ನೀಡಿತ್ತು. ಹೊಸ ನಿಯಮದ ಪ್ರಕಾರ, ಪಾವತಿಯನ್ನು ಕಡಿತಗೊಳಿಸುವ 5 ದಿನಗಳ ಮೊದಲು ಬ್ಯಾಂಕುಗಳು ಗ್ರಾಹಕರಿಗೆ ಅಧಿಸೂಚನೆಯನ್ನು ಕಳುಹಿಸಬೇಕು. ಗ್ರಾಹಕರು ಅದನ್ನು ಅನುಮೋದಿಸಿದ ನಂತರವೇ ಹಣ ಕಡಿತವಾಗಲಿದೆ. 5,000 ರೂಪಾಯಿಗಿಂತ ಹೆಚ್ಚಿನ ಪೇಮೆಂಟ್ ಗೆ ಬ್ಯಾಂಕುಗಳು ಗ್ರಾಹಕರಿಗೆ ಒನ್-ಟೈಮ್ ಪಾಸ್ವರ್ಡ್ ಕಳುಹಿಸಬೇಕಾಗುತ್ತದೆ.
ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ, ಟಾಟಾ ಪವರ್ ಮತ್ತು ಬಿಎಸ್‌ಇಎಸ್ ಮುಂತಾದ ಕಂಪನಿಗಳ ಮೇಲೆ ಇದು ಪರಿಣಾಮ ಬೀರಲಿದೆ. ಅನೇಕ ಬ್ಯಾಂಕ್ ಗಳಲ್ಲಿ ಹೊಸ ನಿಯಮ ಜಾರಿಗೆ ತರಲು ಸೌಲಭ್ಯಗಳಿಲ್ಲ.