alex Certify ಕೊರೊನಾ ಸಂಕಷ್ಟದ ಹೊತ್ತಲ್ಲೇ ATM ಬಳಕೆದಾರರಿಗೆ ಶಾಕ್…? ಹೆಚ್ಚುವರಿ ಶುಲ್ಕದ ಬರೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ಹೊತ್ತಲ್ಲೇ ATM ಬಳಕೆದಾರರಿಗೆ ಶಾಕ್…? ಹೆಚ್ಚುವರಿ ಶುಲ್ಕದ ಬರೆ ಸಾಧ್ಯತೆ

ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆಯೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ಇದೆ. ಬ್ಯಾಂಕ್ ಎಟಿಎಂನಿಂದ 5 ಸಾವಿರ ರೂ.ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಈ ಕುರಿತಂತೆ ಆಲೋಚನೆ ಮಾಡುತ್ತಿದೆ. ಎಟಿಎಂ ಶುಲ್ಕವನ್ನು ಮರುಪರಿಶೀಲಿಸಲು ಆರ್‌ಬಿಐ ಸಮಿತಿಯನ್ನು ರಚಿಸಿದೆ. 5 ಸಾವಿರ ರೂಪಾಯಿಗಳನ್ನು ವಿತ್ ಡ್ರಾ ಮಾಡಲು ಎಟಿಎಂಗಳಿಂದ ಶುಲ್ಕ ಸಂಗ್ರಹಿಸಲು ಸಮಿತಿ ಶಿಫಾರಸು ಮಾಡಿದೆ. ಗ್ರಾಹಕರು ಆನ್‌ಲೈನ್‌ನಲ್ಲಿ ಹೆಚ್ಚು ಹೆಚ್ಚು ವಹಿವಾಟು ನಡೆಸಬೇಕೆನ್ನುವುದು ಆರ್‌ಬಿಐ ಉದ್ದೇಶವಾಗಿದೆ.

ದೊಡ್ಡ ನಗರಗಳಲ್ಲಿ ಎಟಿಎಂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ, 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಪಟ್ಟಣಗಳಲ್ಲಿ ಎಟಿಎಂ ಸಂಖ್ಯೆ ಹೆಚ್ಚಿಸಲು ಆರ್‌ಬಿಐ ನಿರ್ಧರಿಸಿದೆ.

ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದರೆ, ಎಟಿಎಂನಿಂದ ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಹಣವನ್ನು ವಿತ್ ಡ್ರಾ ಮಾಡಲು ಬ್ಯಾಂಕ್ ಗ್ರಾಹಕರಿಂದ 24 ರೂಪಾಯಿ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...