alex Certify ಗುಡ್ ನ್ಯೂಸ್: 850 ರೂ. ಪಾವತಿಸಿದ್ರೆ 5 ಲಕ್ಷ ರೂ. ಆರೋಗ್ಯ ವಿಮೆ, ಏಪ್ರಿಲ್ 1 ರಿಂದಲೇ ನೋಂದಣಿ – ಮೇ 1 ರಿಂದ ಯೋಜನೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: 850 ರೂ. ಪಾವತಿಸಿದ್ರೆ 5 ಲಕ್ಷ ರೂ. ಆರೋಗ್ಯ ವಿಮೆ, ಏಪ್ರಿಲ್ 1 ರಿಂದಲೇ ನೋಂದಣಿ – ಮೇ 1 ರಿಂದ ಯೋಜನೆ ಜಾರಿ

ಜೈಪುರ್: ರಾಜಸ್ಥಾನದಲ್ಲಿ ಮೇ 1 ರಿಂದ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ ಜಾರಿಯಾಗಲಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿಯ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಮೇ 1 ರಿಂದ ಆರಂಭವಾಗಲಿರುವ ಸಾರ್ವತ್ರಿಕ ಆರೋಗ್ಯ ಯೋಜನೆಗೆ ಏಪ್ರಿಲ್ 1 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಯೋಜನೆ ಅನ್ವಯ ಯಾವುದೇ ಕುಟುಂಬ ವಾರ್ಷಿಕ 850 ರೂಪಾಯಿ ಪಾವತಿಸಿ 5 ಲಕ್ಷ ರೂಪಾಯಿವರೆಗೆ ಆರೋಗ್ಯವಿಮೆ ಸೌಲಭ್ಯ ಪಡೆಯಬಹುದಾಗಿದೆ.

ಬಜೆಟ್ ನಲ್ಲಿ ಘೋಷಿಸಲಾದಂತೆ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...