ತನ್ನ ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಿರುವ ಐಆರ್‌ಸಿಟಿಸಿ, ಫೆಬ್ರವರಿ 1, 2021ರಿಂದ ರೈಲ್ವೇ ಪ್ರಯಾಣಿಕರಿಗೆ ಪ್ರೀ-ಬುಕಿಂಗ್ ಮೂಲಕ ಆಹಾರ ಒದಗಿಸುತ್ತಿದೆ.
“ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಅಥವಾ http://ecatering.irctc.co.inಗೆ ಭೇಟಿ ಕೊಡುವ ಮೂಲಕ ಐಆರ್‌ಸಿಟಿಸಿಯ ಇ-ಕೆಟರಿಂಗ್ ಸೇವೆಯ ಮೂಲಕ ಆರೋಗ್ಯಕರ ಹಾಗೂ ರುಚಿಕರ ಆಹಾಯವನ್ನು ಆನಂದಿಸಿ” ಎಂದು ಐಆರ್‌ಸಿಟಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
14 ವರ್ಷದ ಹಿಂದೆ ಕಳೆದುಕೊಂಡಿದ್ದ ಉಡುಪನ್ನ ಈಗ ಹುಡುಕ್ತಿದ್ದಾಳೆ ಈ ಮಹಿಳೆ..!
ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಯಾವುದೇ ಪ್ರಯಾಣಿಕರು ಐಆರ್‌ಸಿಟಿಸಿ ಜಾಲತಾಣಕ್ಕೆ ಭೇಟಿ ಕೊಟ್ಟು ಆಹಾರವನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಸರ್ಚ್ ಬಾರ್ ಮೂಲಕ ರೈಲು ಹಾಗೂ ಸ್ಟೇಷನ್ ಹೆಸರನ್ನು ಆಯ್ಕೆ ಮಾಡಿಕೊಳ್ಳುತ್ತಲೇ ನಿಮ್ಮ ಪಿಎನ್‌ಆರ್ ಸಂಖ್ಯೆಯ ಖಾತ್ರಿ ಕೊಟ್ಟು ನಿಮಗೆ ಯಾವ ಊಟ ಬೇಕೆಂದು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
1323ಕ್ಕೆ ದೂರವಾಣಿ ಕರೆ ಮಾಡುವ ಮೂಲಕ ವೇಟಿಂಗ್ ಲಿಸ್ಟ್ ಅಥವಾ ಖಾತ್ರಿಯಾದ ಪಿಎನ್‌ಆರ್ ಲಗತ್ತಿಸಿ ನಿಮ್ಮ ಆಹಾರವನ್ನು ಬುಕ್ ಮಾಡಹುದಾಗಿದೆ.