alex Certify ʼವರ್ಕ್‌ ಫ್ರಮ್‌ ಹೋಂʼ ಬಿಟ್ಟು ಕಛೇರಿಗೆ ಹೋಗಲು ಯುವತಿಯ ತಕರಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವರ್ಕ್‌ ಫ್ರಮ್‌ ಹೋಂʼ ಬಿಟ್ಟು ಕಛೇರಿಗೆ ಹೋಗಲು ಯುವತಿಯ ತಕರಾರು

ಕಳೆದ ವರ್ಷ ಕೊರೊನಾ ವೈರಸ್ ​ನ್ನು ನಿಯಂತ್ರಣ ಮಾಡಲು ಲಾಕ್​ಡೌನ್​ ಹೇರಿಕೆ ಮಾಡಿದ ಬಳಿಕ ʼವರ್ಕ್​ ಫ್ರಮ್​ ಹೋಂʼಗೆ ಸೂಚನೆ ನೀಡಲಾಗಿತ್ತು.

ಇದಾದ ಬಳಿಕ ಸರಿ ಸುಮಾರು ಒಂದು ವರ್ಷಗಳ ಕಾಲ ಅನೇಕ ಮಂದಿ ವರ್ಕಿಂಗ್​ ಫ್ರಮ್ ಹೋಂ ಮೂಲಕವೇ ಆಫೀಸ್​ ಕೆಲಸ ಮಾಡಿದ್ದಾರೆ. ಆದರೆ ಈಗ ಕೊರೊನಾ ವಿರುದ್ಧ ಲಸಿಕೆ ಪ್ರಯೋಗ ಶುರುವಾಗಿದ್ದು, ಅನೇಕ ಕಂಪನಿಗಳು ತಮ್ಮ ಸಿಬ್ಬಂದಿಯನ್ನ ವಾಪಸ್​ ಕರೆಯಿಸಿಕೊಳ್ತಿವೆ, ಆದರೆ ಇಷ್ಟು ದಿನ ಮನೆಯಲ್ಲೇ ಹಾಸಿಗೆಯ ಮೇಲೆ ಕೂತು ಕೆಲಸ ಮಾಡ್ತಿದ್ದ ಅನೇಕರಿಗೆ ವರ್ಕ್ ಫ್ರಮ್​ ಹೋಂ ಅವಧಿ ಮುಗಿದಿರೋದು ಬೇಸರ ತರಿಸಿದೆ.

ಅದರಲ್ಲೂ ಮಹಿಳೆಯೊಬ್ಬಳು ಪುನಃ ಆಫೀಸ್​ಗೆ ಹೋಗೋದ್ರ ಬಗ್ಗೆ ಕಳವಳ ವ್ಯಕ್ತಪಡಿಸಿದ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಡಿಯೋವನ್ನು​ ಇನ್​ಸ್ಟಾಗ್ರಾಂನಲ್ಲಿ ಹರ್ಜಾಸ್​ ಸೇಠಿ ಎಂಬವರು ಶೇರ್​ ಮಾಡಿದ್ದಾರೆ.

ನನ್ನ ಜೀವನದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕೆಲವೇ ಕ್ಷಣಗಳ ಮುಂಚೆ ಆಫೀಸ್​ನಿಂದ ಒಂದು ಇಮೇಲ್​ ಬಂದಿದ್ದು ಅದರ ವಿಷಯ ಆಫೀಸ್​ಗೆ ವಾಪಸ್​ ಬನ್ನಿ ಎಂದಾಗಿದೆ. ಅಂದರೆ ನಾನಿನ್ನು ಬೆಳಗ್ಗೆ ಎದ್ದು, ಸ್ನಾನ ಮಾಡಿ, ತಯಾರಾಗಿ ಆಫೀಸ್​ಗೆ ಹೋಗಬೇಕು. ಜನರ ಮುಖವನ್ನ ನೋಡಲೇಬೇಕು. ನನಗಂತೂ ಭಯವಾಗ್ತಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಅಲ್ಲದೇ ಆಫೀಸ್​ಗೆ ಯಾಕೆ ಮರಳಿ ಕರೆಸಿಕೊಳ್ಳಬೇಕಿತ್ತು..? ಈಗ ಎಲ್ಲವೂ ಸರಿಯಾಗೇ ನಡೆಯುತ್ತಿದೆ ಅಲ್ಲವೇ..? ನಿಮ್ಮ ಸಂಪತ್ತು ಹೆಚ್ಚುತ್ತಿದೆ. ನಿಮ್ಮ ಸಾರಿಗೆ ವ್ಯವಸ್ಥೆಯ ಹಣವೂ ಉಳಿತಾಯವಾಗ್ತಿದೆ. ಇಷ್ಟೆಲ್ಲಾ ಲಾಭವಿದೆ ಅಂದಮೇಲೆ ಬಡವರ ಹೊಟ್ಟೆ ಮೇಲೆ ಏಕೆ ಹೊಡೆಯುತ್ತಿದ್ದೀರಾ..? ಅಲ್ಲದೇ ನಾನು ಮನೆಯಲ್ಲಿ ಪೈಜಾಮಾ ಧರಿಸಿ ಕೆಲಸ ಮಾಡೋದ್ರಲ್ಲೇ ಆರಾಮಾಗಿದ್ದೆ. ಇನ್ನು ಜೀನ್ಸ್ ಧರಿಸಬೇಕೆ ಎಂದು ಅಳಲನ್ನ ತೋಡಿಕೊಂಡಿದ್ದಾಳೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by Harjas Sethi (@vellijanani)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...