ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ NEFT, RTGS, NACH ಮತ್ತು ತಕ್ಷಣದ ಪಾವತಿ ಸೇವಾ ವಹಿವಾಟುಗಳ ಮೇಲಿನ ಸೇವಾ ಶುಲ್ಕವನ್ನು ಹೆಚ್ಚಿಸಿದೆ.
ಸಾರ್ವಜನಿಕ ವಲಯದ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್(NACH) ಇ-ಮ್ಯಾಂಡೇಟ್ ಪರಿಶೀಲನೆ, ತಕ್ಷಣದ ಪಾವತಿ ಸೇವೆಯ ಬಳಕೆ ಜೊತೆಗೆ ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್(RTGS), ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್(NEFT) ವಹಿವಾಟುಗಳ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ.
ಮೇ 20 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಬ್ಯಾಂಕ್ ಈಗ RTGS, NEFT, ಮತ್ತು NACH eMandate ಮತ್ತು IMPS ವಹಿವಾಟುಗಳ ಪರಿಷ್ಕೃತ ಸೇವಾ ಶುಲ್ಕಗಳನ್ನು ಕಡಿತಗೊಳಿಸುತ್ತಿದೆ.
ಪರಿಷ್ಕೃತ RTGS ಶುಲ್ಕಗಳು
ಈ ಹಿಂದೆ, 2 ಲಕ್ಷ ರೂ.ನಿಂದ 5 ಲಕ್ಷ ರೂ. ಸ್ಲ್ಯಾಬ್ ಗಳಿಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ 20 ರೂ. ಮತ್ತು ಆನ್ ಲೈನ್ ಆರ್.ಟಿ.ಜಿ.ಎಸ್. ವಹಿವಾಟುಗಳಿಗೆ ಶುಲ್ಕವಿರಲಿಲ್ಲ. ಈಗ ಇದನ್ನು ಶಾಖೆಗೆ 24.50 ರೂ.ಮತ್ತು ಆನ್ ಲೈನ್ ವಹಿವಾಟುಗಳಿಗೆ 24 ರೂ.ಗೆ ಹೆಚ್ಚಿಸಲಾಗಿದೆ. 5 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಸೇವಾ ಶುಲ್ಕವನ್ನು ಶಾಖೆಯಲ್ಲಿ 49.50 ರೂ. ಮತ್ತು ಆನ್‌ಲೈನ್ ವಹಿವಾಟುಗಳಿಗೆ 40 ರೂ. ನಿಗದಿ ಮಾಡಲಾಗಿದೆ.
ಪರಿಷ್ಕೃತ NEFT ಶುಲ್ಕಗಳು
ಈ ಹಿಂದೆ, PNB ಶಾಖೆಯಲ್ಲಿ 10,000 ರೂ. ವರೆಗಿನ NEFT ವಹಿವಾಟುಗಳಿಗೆ 2 ರೂ., ಶುಲ್ಕವಿದ್ದು, ಆನ್ ಲೈನ್ ವಹಿವಾಟುಗಳಿಗೆ ಶುಲ್ಕ ಇರಲಿಲ್ಲ. ಇದನ್ನು ಈಗ ಶಾಖೆಯಲ್ಲಿ 2.25 ರೂ.ಗೆ ಮತ್ತು ಆನ್ ಲೈನ್ ವಹಿವಾಟಿಗೆ 1.75 ರೂ.ಗೆ ಹೆಚ್ಚಿಸಲಾಗಿದೆ. 10,000 ರೂ.ಗಿಂತ ಹೆಚ್ಚು ಮತ್ತು 1 ಲಕ್ಷ ರೂ.ವರೆಗಿನ ವಹಿವಾಟುಗಳ ಸೇವಾ ಶುಲ್ಕಗಳಿಗಾಗಿ, ಬ್ಯಾಂಕ್ ಈ ಹಿಂದೆ ಶಾಖೆಗಳಲ್ಲಿ 4 ರೂ., ಆನ್ ಲೈನ್ ನಲ್ಲಿ ಶುಲ್ಕ ಶೂನ್ಯವಾಗಿತ್ತು. ಈಗ ಅದನ್ನು ಶಾಖೆಗೆ 4.75 ರೂ., ಮತ್ತು ಆನ್ ಲೈನ್ ವಹಿವಾಟುಗಳಿಗೆ 4.25 ರೂ.ಗೆ ಹೆಚ್ಚಿಸಲಾಗಿದೆ.
1 ಲಕ್ಷ ರೂ. ಮೀರಿದ ಮತ್ತು 2 ಲಕ್ಷ ರೂ.ವರೆಗಿನ ವಹಿವಾಟುಗಳ ಸೇವಾ ಶುಲ್ಕಗಳು ಈ ಹಿಂದೆ ಶಾಖೆಯಲ್ಲಿ 14 ರೂ., ಆನ್ ಲೈನ್ ನಲ್ಲಿ ಶೂನ್ಯವಾಗಿದ್ದು, ಈಗ ಬ್ರಾಂಚ್ ನಲ್ಲಿ 14.75 ರೂ., ಆನ್ ಲೈನ್ ವಹಿವಾಟುಗಳಿಗೆ 14.25 ರೂ. ಗೆ ಹೆಚ್ಚಿಸಲಾಗಿದೆ.
2 ಲಕ್ಷ ರೂ.ಗಿಂತ ಹೆಚ್ಚಿನ NEFT ವಹಿವಾಟುಗಳಲ್ಲಿ, ಶಾಖೆಗಳಲ್ಲಿನ ಸೇವಾ ಶುಲ್ಕವನ್ನು 24 ರೂ.ನಿಂದ 24.75 ರೂ., ಆನ್ ಲೈನ್ ವಹಿವಾಟುಗಳಿಗೆ 24.25 ರೂ.ಗೆ ಹೆಚ್ಚಿಸಲಾಗಿದೆ.
ಮೇಲಿನ ಎಲ್ಲಾ ಶುಲ್ಕಗಳು ಅನ್ವಯವಾಗುವ GST ಯನ್ನು ಹೊರತುಪಡಿಸಿವೆ. ಆನ್ ಲೈನ್ ನಲ್ಲಿ ಪ್ರಾರಂಭಿಸಲಾದ NEFT ಹಣ ವರ್ಗಾವಣೆಗೆ ಸೇವಿಂಗ್ಸ್ ಬ್ಯಾಂಕ್ ಖಾತೆದಾರರಿಂದ ಯಾವುದೇ ಶುಲ್ಕವಿಲ್ಲ ಎಂದು PNB ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಪರಿಷ್ಕೃತ NACH ಶುಲ್ಕ
ಮೇ 28, 2022 ರಂತೆ ಆಂತರಿಕ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್(NACH) ಇ-ಮ್ಯಾಂಡೇಟ್ ಪರಿಶೀಲನೆಗಾಗಿ ಶುಲ್ಕಗಳು, ಬ್ಯಾಂಕ್ ಪ್ರತಿ ಸ್ವೀಕಾರದ ಮೇಲೆ 100 ರೂ. ವಿಧಿಸುತ್ತದೆ. ಈ ಸೇವಾ ಶುಲ್ಕವು ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್(NACH) ಆದೇಶಕ್ಕೆ ಅನ್ವಯವಾಗುವ ಯಾವುದೇ GST ಹೊರತುಪಡಿಸಿದೆ.
ಪರಿಷ್ಕೃತ IMPS ಶುಲ್ಕಗಳು
ತಕ್ಷಣದ ಪಾವತಿ ಸೇವೆ(IMPS) ಬಳಸಿಕೊಂಡು 1000 ರೂ.ವರೆಗಿನ ವಹಿವಾಟುಗಳಿಗೆ ಬ್ಯಾಂಕ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದಾಗ್ಯೂ, 1001 ರೂ.ನಿಂದ 1 ಲಕ್ಷ ರೂ. ನಡುವಿನ IMPS ವಹಿವಾಟುಗಳ ಮೇಲಿನ ಸೇವಾ ಶುಲ್ಕವನ್ನು 5 ರೂ.ನಿಂದ 6 ರೂ. ಹಾಗೂ ಜಿಎಸ್ಟಿಗೆ ಹೆಚ್ಚಿಸಲಾಗಿದೆ. 1 ಲಕ್ಷ ರೂ. ಮೇಲಿನ ಐಎಂಪಿಎಸ್ ವಹಿವಾಟಿನ ಮೇಲಿನ ಸೇವಾ ಶುಲ್ಕಗಳನ್ನು 10 ರಿಂದ 12 ರೂ. ಹಾಗೂ ಜಿಎಸ್ಟಿಗೆ ಹೆಚ್ಚಿಸಲಾಗಿದೆ.