alex Certify BIG NEWS: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಪಬ್​ ಜಿ ರೀ ಲಾಂಚ್​..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಪಬ್​ ಜಿ ರೀ ಲಾಂಚ್​..?

ಬಳಕೆದಾರರ ಮಾಹಿತಿ ಸೋರಿಕೆ ಆರೋಪದಡಿಯಲ್ಲಿ ಭಾರತದಲ್ಲಿ ಬ್ಯಾನ್​ ಆದ ಚೀನಿ ಆಪ್​ಗಳಲ್ಲಿ ಪಬ್​ ಜಿ ಕೂಡ ಒಂದು. ಟಿಕ್​ಟಾಕ್​, ವಿ ಚಾಟ್​​ ಗಳಂತೆಯೇ ಪಬ್​ ಜಿ ಹಾಗೂ ಪಬ್​ ಜಿ ಲೈಟ್​ ಎರಡನ್ನೂ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಪಬ್​ ಜಿ ಇದೀಗ ಭಾರತಕ್ಕೆ ಕಂ ಬ್ಯಾಕ್​ ಮಾಡೋಕೆ ಸಿದ್ಧತೆ ನಡೆಸಿದೆ ಅಂತಾ ಹೇಳಲಾಗ್ತಿದೆ.

ದೀಪಾವಳಿ ಹಬ್ಬದ ವಿಶೇಷವಾಗಿ ಪಬ್​ಜಿ ತಂಡ ಭಾರತ ಮಾರುಕಟ್ಟೆಯಲ್ಲಿ ಪಬ್​ ಜಿ ರೀ ಲಾಂಚ್​ ಘೋಷಣೆ ಮಾಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಪಬ್​ ಜಿ ಆಪ್​ನ್ನ ಭಾರತದಲ್ಲಿ ಬ್ಯಾನ್​ ಮಾಡಿದ ಬಳಿಕ ಈ ಕಂಪನಿ ತನ್ನ ಪಬ್​ ಜಿ ಮೊಬೈಲ್​ ಇಂಡಿಯನ್​ ಐಪಿ ಹಕ್ಕುಗಳನ್ನ ಬ್ಲೂ ಹೋಲ್​ಗೆ ಹಸ್ತಾಂತರಿಸಿದೆ. ಈ ಬ್ಲೂ ಹೋಲ್​​ ದಕ್ಷಿಣ ಕೊರಿಯಾದ ಕಂಪನಿಯಾಗಿದೆ.

ಹೀಗಾಗಿ ಭಾರತದಲ್ಲಿ ಪಬ್​ ಜಿ ರೀ ಲಾಂಚ್​ ಆದರೆ ಅದು ಚೀನಿ ಆಪ್​ ಆಗಿರೋದಿಲ್ಲ. ಬದಲಾಗಿ ದಕ್ಷಿಣ ಕೊರಿಯಾದ ಗೇಮಿಂಗ್​ ಅಪ್ಲಿಕೇಶನ್​ ಆಗಿ ಭಾರತಕ್ಕೆ ರೀ ಎಂಟ್ರಿ ಕೊಡೋ ಸಾಧ್ಯತೆ ಇದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...