ತಮ್ಮ ಮೆಚ್ಚಿನ ಪಬ್‌ಜೀ ರೀಲಾಂಚ್ ಆಗಲಿ ಎಂದು ದೇಶದ ಲಕ್ಷಾಂತರ ಯುವಕರು ಹಾಗೂ ಟೀನೇಜರ್‌ಗಳು ಕಾಯುತ್ತಿದ್ದಂತೆ, ಭಾರತ ಸರ್ಕಾರದ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಪಬ್‌ಜೀ ಮೊಬೈಲ್ ಇಂಡಿಯಾ ಶೀಘ್ರದಲ್ಲೇ ಲಾಂಚ್ ಆಗಲಿದೆ ಎಂದು ಸುದ್ದಿ ಪತ್ರಿಕೆಗಳ ಅನೇಕ ವರದಿಗಳು ಹೇಳುತ್ತಿವೆ.
ವೈಯಕ್ತಿಕ ವಿವರಗಳ ಖಾಸಗಿತನದ ಕಳಕಳಿಯ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತ ಸರ್ಕಾರ ಪಬ್‌ಜೀ ಗೇಮ್ ಅನ್ನು ನಿಷೇಧಿಸಿತ್ತು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪಬ್‌ಜೀ ಮೊಬೈಲ್ ಇಂಡಿಯಾ ಲಾಂಚ್ ಆಗಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ. ಜೊತೆಗೆ, ಭಾರತದಲ್ಲಿರುವ ತನ್ನ ಅಂಗ ಸಂಸ್ಥೆಯಲ್ಲಿ ಕೆಲಸ ಮಾಡಲು ಉದ್ಯೋಗಾವಕಾಶಗಳನ್ನು ತೆರೆದು ಲಿಂಕ್ಡಿನ್‌ನಲ್ಲಿ ಆಫರ್ ಬಿಟ್ಟಿದ್ದ ಪಬ್‌ಜೀ ಕಾಪೋರೇಷನ್ ಸಹ ಈ ಮಾತನ್ನು ಇನ್ನಷ್ಟು ಪುಷ್ಟೀಕರಿಸಿದೆ.
ಲವ್ ಲೆಟರ್ ಯಾವ್ದು, ನೋಟೀಸ್ ಯಾವ್ದು ಎಂಬ ವ್ಯತ್ಯಾಸ ಗೊತ್ತಿಲ್ಲದವರ ಬಗ್ಗೆ ಏನು ಮಾತನಾಡುವುದು…? ಯತ್ನಾಳ್ ಗೆ ನಳಿನ್ ಕಟೀಲ್ ತಿರುಗೇಟು
ಹೂಡಿಕೆ ಹಾಗೂ ವ್ಯೂಹ ರಚನೆ ವಿಶ್ಲೇಷಕರ ಹುದ್ದೆಗೆ ಓಪನಿಂಗ್ ಇದೆ ಎಂದಿರುವ ಪಬ್‌ಜೀ, ಈ ಹುದ್ದೆ ಮೂಲಕ ದೇಶದಲ್ಲಿ ತಾನು ಮಾಡುವ ವಿಲೀನ ಹಾಗೂ ಸ್ವಾಧೀನಗಳ ಮೇಲುಸ್ತುವಾರಿ ನೋಡಿಕೊಳ್ಳಲು ಪ್ಲಾನ್ ಮಾಡಿದೆ. ಇದೀಗ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಗೆ ಮತ್ತೊಂದು ಓಪನಿಂಗ್ ಬಗ್ಗೆ ಲಿಂಕ್ಡಿನ್ ಪ್ರಕಟಿಸಿದೆ.
ಒಟ್ಟಾರೆ ಭಾರತದಲ್ಲಿ ಆರು ರೀತಿಯ ಹೊಸ ಹುದ್ದೆಗಳ ಪಟ್ಟಿ ಮಾಡಿರುವ ಪಬ್‌ಜೀ ಕಾರ್ಪೋರೇಷನ್, ಪಬ್‌ಜೀ ಮೊಬೈಲ್ ಇಂಡಿಯಾ ಶೀಘ್ರವೇ ಲಾಂಚ್ ಆಗುವ ಲಕ್ಷಣಗಳನ್ನು ತೋರುತ್ತಿದೆ.