alex Certify ಲವ್ ಲೆಟರ್ ಯಾವ್ದು, ನೋಟೀಸ್ ಯಾವ್ದು ಎಂಬ ವ್ಯತ್ಯಾಸ ಗೊತ್ತಿಲ್ಲದವರ ಬಗ್ಗೆ ಏನು ಮಾತನಾಡುವುದು…? ಯತ್ನಾಳ್ ಗೆ ನಳಿನ್ ಕಟೀಲ್ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್ ಲೆಟರ್ ಯಾವ್ದು, ನೋಟೀಸ್ ಯಾವ್ದು ಎಂಬ ವ್ಯತ್ಯಾಸ ಗೊತ್ತಿಲ್ಲದವರ ಬಗ್ಗೆ ಏನು ಮಾತನಾಡುವುದು…? ಯತ್ನಾಳ್ ಗೆ ನಳಿನ್ ಕಟೀಲ್ ತಿರುಗೇಟು

ಬಾಗಲಕೋಟೆ: ಬಿಜೆಪಿ ಹೈಕಮಾಂಡ್ ನೀಡಿದ ನೋಟೀಸ್ ಗೆ ಲವ್ ಲೆಟರ್ ಎಂದು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನೋಟೀಸ್ ಗೂ ಲವ್ ಲೆಟರ್ ಗೂ ವ್ಯತ್ಯಾಸ ಗೊತ್ತಿಲ್ಲದವರ ಬಗ್ಗೆ ಏನು ಹೇಳುವುದು ಎಂದು ಗುಡುಗಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ. ಯಡಿಯೂರಪ್ಪನವರು ಸರ್ವ ಸಮ್ಮತ ನಾಯಕ. ಇನ್ನೂ ಎರಡುವರೆ ವರ್ಷಗಳ ಕಾಲ ಸಿಎಂ ಬದಲಾವಣೆ ಇಲ್ಲ. ಉಪಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದರು.

ಜನರ ಕಾಲಿಗೆ ಬಿದ್ದು ಕಣ್ಣೀರಿಟ್ಟು ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ

ಪಕ್ಷದ ಬಗ್ಗೆ, ಸಿಎಂ ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಯತ್ನಾಳ್ ಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಅದಕ್ಕೆ ಅವರು ಇನ್ನೂ ಉತ್ತರ ಕೊಟ್ಟಿಲ್ಲ. ಇನ್ನೊಂದು ನೋಟೀಸ್ ನೀಡಲಾಗುತ್ತೆ. ಶಿಸ್ತು ಸಮಿತಿಯಿಂದ ಕ್ರಮ ಕೈಗೊಳ್ಳಲಾಗುತ್ತೆ. ಅವಲೋಕನ ನಡೆಸಲಾಗುತ್ತಿದೆ. ಒಂದೊಂದೇ ಪ್ರಕ್ರಿಯೆ ಮೂಲಕ ಕ್ರಮ ಕೈಗೊಳ್ಳುತ್ತೆ. ಇಷ್ಟಾಗ್ಯೂ ಹದ್ದು ಮೀರಿ ಮಾತನಾಡುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...