ಟರ್ಮ್ ಪ್ಲಾನ್ ತೆಗೆದುಕೊಳ್ಳುತ್ತಿರುವವರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮಹತ್ವದ ಮಾಹಿತಿ ನೀಡಿದೆ. ಯುಎಲ್ ಐಪಿ ಸೆಕ್ಷನ್ 10ರ ಅಡಿಯಲ್ಲಿ 1 ವರ್ಷದಲ್ಲಿ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರೀಮಿಯಂ ಮೇಲಿನ ತೆರಿಗೆ ವಿನಾಯಿತಿಯನ್ನು ತೆಗೆದು ಹಾಕಲು ಪ್ರಸ್ತಾಪಿಸಲಾಗಿದೆ. ಇದು ಅಸ್ಥಿತ್ವದಲ್ಲಿರುವ ಯುಎಲ್ ಐಪಿಗೆ ಅನ್ವಯಿಸುವುದಿಲ್ಲ. ಫೆಬ್ರವರಿ 1, 2021ರ ನಂತ್ರ ತೆಗೆದುಕೊಳ್ಳುವ ನೀತಿಗಳ ಮೇಲೆ ಪ್ರಭಾವ ಬೀರಲಿದೆ.
ಬಜೆಟ್ ಪ್ರಕಾರ ಇನ್ಮುಂದೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರೀಮಿಯಂ ಮೊತ್ತಕ್ಕೆ ತೆರಿಗೆ ವಿಧಿಸಲಾಗುವುದು. ಇಷ್ಟೇ ಅಲ್ಲ ಸಂಬಳ ತೆಗೆದುಕೊಳ್ಳುತ್ತಿದ್ದು, ಪಿಎಫ್ ಕಡಿತಗೊಳ್ಳುತ್ತಿದ್ದರೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಪಿಎಫ್ ಕಡಿತಕ್ಕೆ ನಿರ್ಮಲಾ ಸೀತಾರಾಮನ್ ಕ್ಯಾಪ್ ವಿಧಿಸಿದ್ದಾರೆ. 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಪಿಎಫ್ ಕಡಿತಕ್ಕೆ ತೆರಿಗೆ ವಿಧಿಸಲಾಗುವುದು.
ಲಾಕ್ ಡೌನ್ ಸಮಯದಲ್ಲಿ ವಿಚಿತ್ರ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಹಣ ಗಳಿಸಿದೆ ಈ ತಂಡ….!
ಭವಿಷ್ಯ ನಿಧಿ ಕಾಯ್ದೆ 1925ರ 10 ಮತ್ತು 11ರ ಅಡಿಯಲ್ಲಿ ಇಪಿಎಫ್ ಮೇಲಿನ ಬಡ್ಡಿ ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಸರ್ಕಾರದ ಪ್ರಕಾರ ಕೆಲ ಉದ್ಯೋಗಿಗಳು ಹೆಚ್ಚಿನ ಪಿಎಫ್ ಕಡಿತದ ಸೌಲಭ್ಯ ಪಡೆಯುತ್ತಿದ್ದಾರೆ. ಇದ್ರಿಂದ ಅವ್ರಿಗೆ ಹೆಚ್ಚಿನ ಬಡ್ಡಿ ಸಿಗ್ತಿದೆ. ತೆರಿಗೆ ಉಳಿಸಲು ಹೆಚ್ಚಿನ ಸಂಬಳ ಹೊಂದಿರುವವರು ಸ್ವಯಂ ಪ್ರೇರಿತ ಪಿಎಫ್ ಕಡಿತ ಮಾಡಿಕೊಳ್ತಿದ್ದು, ಸರ್ಕಾರದ ಈ ನಿಯಮ ಅವ್ರ ಮೇಲೆ ಪರಿಣಾಮ ಬೀರಲಿದೆ.