ಬೆಂಗಳೂರು: ಬಹು ದಿನಗಳ ನಂತರ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರಂತೂ ಸಂಭ್ರಮದಿಂದ ಮದ್ಯ ಖರೀದಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದಿಂದ ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ.
ಮದ್ಯ ಮಾರಾಟದ ಎರಡನೇ ದಿನವಾದ ಇಂದಿನಿಂದ ಸರಬರಾಜಾಗುವ ಮದ್ಯಕ್ಕೆ ನೂತನ ದರ ವಿಧಿಸಲಾಗುವುದು. ಮದ್ಯಕ್ಕೆ ಶೇಕಡ 6 ರಷ್ಟು ದರ ಏರಿಕೆ ಮಾಡಲಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ದರ ಹೆಚ್ಚಳಕ್ಕೆ ಆದೇಶಿಸಲಾಗಿತ್ತು. ಲಾಕ್ ಡೌನ್ ನಿಂದಾಗಿ ಆದೇಶ ಅನುಷ್ಠಾನವಾಗದ ದರ ಹೆಚ್ಚಳವಾಗಿರಲಿಲ್ಲ. ಮೊದಲ ದಿನ ಹಳೆ ದರದಲ್ಲೇ ಮದ್ಯ ಮಾರಾಟ ಮಾಡಲಾಗಿದ್ದು, ಇಂದಿನಿಂದ ಸರಬರಾಜು ಮಾಡುವ ಮದ್ಯಕ್ಕೆ ಹೊಸ ದರ ಇರಲಿದೆ.
ಬಜೆಟ್ ನಲ್ಲಿ ವಿವಿಧ ಮದ್ಯಗಳ ಮೇಲಿನ ತೆರಿಗೆಯನ್ನು ಶೇಕಡ 6 ರಷ್ಟು ಹೆಚ್ಚಳ ಮಾಡಿದ್ದು, ಇದರಿಂದಾಗಿ ವಿವಿಧ ಬ್ರಾಂಡ್ ಮದ್ಯದ ಬೆಲೆ 180 ಎಂಎಲ್ ದರ ಕನಿಷ್ಠ 3 ರೂಪಾಯಿಯಿಂದ 30 ರೂಪಾಯಿಯವರೆಗೆ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.