alex Certify ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಸಿಗಲಿದೆ ʼಪಿಂಚಣಿʼ ಜೊತೆ ಉತ್ತಮ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಸಿಗಲಿದೆ ʼಪಿಂಚಣಿʼ ಜೊತೆ ಉತ್ತಮ ಲಾಭ

ಪ್ರಧಾನ್ ಮಂತ್ರಿ ʼವಯೋ ವಂದನ್ʼ ಯೋಜನೆ ಪಿಂಚಣಿ ಯೋಜನೆಯಾಗಿದೆ. ಇದ್ರಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿ ಜೊತೆ ಉತ್ತಮ ಲಾಭ  ಪಡೆಯಬಹುದು. ಹಿರಿಯ ನಾಗರಿಕರಿಗೆ 10 ವರ್ಷಗಳವರೆಗೆ ನಿಗದಿತ ದರದಲ್ಲಿ ಪಿಂಚಣಿ ಸಿಗಲಿದೆ. ಈ ಯೋಜನೆಯಲ್ಲಿ ಡೆತ್ ಬೆನಿಫಿಟ್ ಸಹ ನೀಡಲಾಗ್ತಿದೆ. ಆರಂಭದಲ್ಲಿ ಈ ಪಿಂಚಣಿ ಯೋಜನೆ ಮಾರ್ಚ್ 31, 2020ರವರೆಗಿತ್ತು. ಅದನ್ನು ಮಾರ್ಚ್ 31, 2023ರವರೆಗೆ ವಿಸ್ತರಿಸಲಾಗಿದೆ.

ಪ್ರಧಾನ್ ಮಂತ್ರಿ ವಯೋ ವಂದನ ಯೋಜನೆಗೆ ಕನಿಷ್ಠ ವಯೋಮಿತಿ 60 ವರ್ಷ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಈ ಯೋಜನೆ ಪ್ರಯೋಜನಕಾರಿ. ಗರಿಷ್ಠ ವಯಸ್ಸಿನ ಮಿತಿಯಿಲ್ಲ. ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಗರಿಷ್ಠ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಮೇ.4, 2017 ರಂದು ಪ್ರಾರಂಭಿಸಲಾಯಿತು.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಶೇಕಡಾ 8ರಷ್ಟು ಬಡ್ಡಿ ಸಿಗಲಿದೆ. ವಾರ್ಷಿಕ ಪಿಂಚಣಿಯನ್ನು ಆಯ್ಕೆ ಮಾಡಿದಾಗ ಶೇಕಡಾ 8.3ರಷ್ಟು ಬಡ್ಡಿ ಸಿಗುತ್ತದೆ. ಆರಂಭದಲ್ಲಿ ಇದರ ಗರಿಷ್ಠ ಮಿತಿ ಏಳು ಲಕ್ಷ ರೂಪಾಯಿಯಾಗಿತ್ತು. ಈಗ  ಅದನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...