ಪ್ರಧಾನ್ ಮಂತ್ರಿ ʼವಯೋ ವಂದನ್ʼ ಯೋಜನೆ ಪಿಂಚಣಿ ಯೋಜನೆಯಾಗಿದೆ. ಇದ್ರಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿ ಜೊತೆ ಉತ್ತಮ ಲಾಭ ಪಡೆಯಬಹುದು. ಹಿರಿಯ ನಾಗರಿಕರಿಗೆ 10 ವರ್ಷಗಳವರೆಗೆ ನಿಗದಿತ ದರದಲ್ಲಿ ಪಿಂಚಣಿ ಸಿಗಲಿದೆ. ಈ ಯೋಜನೆಯಲ್ಲಿ ಡೆತ್ ಬೆನಿಫಿಟ್ ಸಹ ನೀಡಲಾಗ್ತಿದೆ. ಆರಂಭದಲ್ಲಿ ಈ ಪಿಂಚಣಿ ಯೋಜನೆ ಮಾರ್ಚ್ 31, 2020ರವರೆಗಿತ್ತು. ಅದನ್ನು ಮಾರ್ಚ್ 31, 2023ರವರೆಗೆ ವಿಸ್ತರಿಸಲಾಗಿದೆ.
ಪ್ರಧಾನ್ ಮಂತ್ರಿ ವಯೋ ವಂದನ ಯೋಜನೆಗೆ ಕನಿಷ್ಠ ವಯೋಮಿತಿ 60 ವರ್ಷ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಈ ಯೋಜನೆ ಪ್ರಯೋಜನಕಾರಿ. ಗರಿಷ್ಠ ವಯಸ್ಸಿನ ಮಿತಿಯಿಲ್ಲ. ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಗರಿಷ್ಠ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಮೇ.4, 2017 ರಂದು ಪ್ರಾರಂಭಿಸಲಾಯಿತು.
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಶೇಕಡಾ 8ರಷ್ಟು ಬಡ್ಡಿ ಸಿಗಲಿದೆ. ವಾರ್ಷಿಕ ಪಿಂಚಣಿಯನ್ನು ಆಯ್ಕೆ ಮಾಡಿದಾಗ ಶೇಕಡಾ 8.3ರಷ್ಟು ಬಡ್ಡಿ ಸಿಗುತ್ತದೆ. ಆರಂಭದಲ್ಲಿ ಇದರ ಗರಿಷ್ಠ ಮಿತಿ ಏಳು ಲಕ್ಷ ರೂಪಾಯಿಯಾಗಿತ್ತು. ಈಗ ಅದನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.