alex Certify ʼಪಾಸಿಟಿವ್ ಪೇʼ ಸೌಲಭ್ಯದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಾಸಿಟಿವ್ ಪೇʼ ಸೌಲಭ್ಯದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಬ್ಯಾಂಕುಗಳ ಚೆಕ್ ಮೇಲೆ ಪಾಸಿಟಿವ್ ಪೇ ವ್ಯವಸ್ಥೆಯನ್ನು ಹೊಸ ವರ್ಷದ ಮೊದಲ ದಿನದಿಂದ ಅನುಷ್ಠಾನಕ್ಕೆ ತರಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಲೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮಕ್ಕೆ ಮುಂದಾಗಿದೆ.

50 ಸಾವಿರ ರೂ.ಗಳ ಮೇಲ್ಪಟ್ಟ ಪಾವತಿಗಳಿಗೆ ಪ್ರಮುಖ ವಿವರಗಳ ಮರುಖಾತ್ರಿಯ ಅಗತ್ಯತೆಯನ್ನು ಈ ವ್ಯವಸ್ಥೆ ಅಡಿ ಕಡ್ಡಾಯ ಮಾಡಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳುವುದು ಖಾತೆದಾರರಿಗೆ ಬಿಟ್ಟಿದ್ದು. ಆದರೆ ಐದು ಲಕ್ಷ ರೂ.ಗಳ ಮೇಲ್ಪಟ್ಟ ವ್ಯವಹಾರಗಳಿಗೆ ಮೇಲ್ಕಂಡ ವ್ಯವಸ್ಥೆಯನ್ನು ಕಡ್ಡಾಯ ಮಾಡಲು ಬ್ಯಾಂಕುಗಳು ಮುಂದಾಗಬಹುದು.

ಈ ವ್ಯವಸ್ಥೆಯಡಿ, ಚೆಕ್‌ ಬರೆದುಕೊಟ್ಟ ವ್ಯಕ್ತಿಯು ದುಡ್ಡನ್ನು ಹಿಂಪಡೆಯುವ ಬ್ಯಾಂಕಿಗೆ ಎಸ್‌ಎಂಎಸ್, ಮೊಬೈಲ್ ಕಿರು ತಂತ್ರಾಂಶ, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಗಳ ಮುಖಾಂತರ ಚೆಕ್‌ನ ಸಂಖ್ಯೆ ಸೇರಿದಂತೆ ಇನ್ನಿತರ ವಿವರಗಳನ್ನು ಮತ್ತೊಮ್ಮೆ ಖಾತ್ರಿ ಮಾಡಬೇಕಾಗುತ್ತದೆ. ಮರುಖಾತ್ರಿ ಸಂದರ್ಭ ಏನಾದರೂ ಮ್ಯಾಚಿಂಗ್ ಆಗದೇ ಹೋದಲ್ಲಿ ಈ ಸಂಬಂಧ ಹಣ ಹಿಂಪಡೆಯುವ ಹಾಗೂ ಆತಿಥೇಯ ಬ್ಯಾಂಕ್‌ಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...