![](https://kannadadunia.com/wp-content/uploads/2021/01/b994a947-f058-4ece-9cd0-8d6d565166d1.jpg)
ಬ್ಯಾಂಕುಗಳ ಚೆಕ್ ಮೇಲೆ ಪಾಸಿಟಿವ್ ಪೇ ವ್ಯವಸ್ಥೆಯನ್ನು ಹೊಸ ವರ್ಷದ ಮೊದಲ ದಿನದಿಂದ ಅನುಷ್ಠಾನಕ್ಕೆ ತರಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಲೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮಕ್ಕೆ ಮುಂದಾಗಿದೆ.
50 ಸಾವಿರ ರೂ.ಗಳ ಮೇಲ್ಪಟ್ಟ ಪಾವತಿಗಳಿಗೆ ಪ್ರಮುಖ ವಿವರಗಳ ಮರುಖಾತ್ರಿಯ ಅಗತ್ಯತೆಯನ್ನು ಈ ವ್ಯವಸ್ಥೆ ಅಡಿ ಕಡ್ಡಾಯ ಮಾಡಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳುವುದು ಖಾತೆದಾರರಿಗೆ ಬಿಟ್ಟಿದ್ದು. ಆದರೆ ಐದು ಲಕ್ಷ ರೂ.ಗಳ ಮೇಲ್ಪಟ್ಟ ವ್ಯವಹಾರಗಳಿಗೆ ಮೇಲ್ಕಂಡ ವ್ಯವಸ್ಥೆಯನ್ನು ಕಡ್ಡಾಯ ಮಾಡಲು ಬ್ಯಾಂಕುಗಳು ಮುಂದಾಗಬಹುದು.
ಈ ವ್ಯವಸ್ಥೆಯಡಿ, ಚೆಕ್ ಬರೆದುಕೊಟ್ಟ ವ್ಯಕ್ತಿಯು ದುಡ್ಡನ್ನು ಹಿಂಪಡೆಯುವ ಬ್ಯಾಂಕಿಗೆ ಎಸ್‌ಎಂಎಸ್, ಮೊಬೈಲ್ ಕಿರು ತಂತ್ರಾಂಶ, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಗಳ ಮುಖಾಂತರ ಚೆಕ್‌ನ ಸಂಖ್ಯೆ ಸೇರಿದಂತೆ ಇನ್ನಿತರ ವಿವರಗಳನ್ನು ಮತ್ತೊಮ್ಮೆ ಖಾತ್ರಿ ಮಾಡಬೇಕಾಗುತ್ತದೆ. ಮರುಖಾತ್ರಿ ಸಂದರ್ಭ ಏನಾದರೂ ಮ್ಯಾಚಿಂಗ್ ಆಗದೇ ಹೋದಲ್ಲಿ ಈ ಸಂಬಂಧ ಹಣ ಹಿಂಪಡೆಯುವ ಹಾಗೂ ಆತಿಥೇಯ ಬ್ಯಾಂಕ್‌ಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿವೆ.