ಕ್ರಿಪ್ಟೋಕರೆನ್ಸಿ ಹೂಡಿಕೆದಾರನಾಗಿ ಜನಪ್ರಿಯವಾಗಿದ್ದ ಮಿ. ಗಾಕ್ಸ್ ಎಂಬ ಹ್ಯಾಮ್ಸ್‌ಸ್ಟರ್ ಜೀವಿಯು ಇಹಲೋಕ ತ್ಯಜಿಸಿದೆ.
ಈ ಇಲಿಯ ಚಲನವಲನಗಳನ್ನು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆಂದು ಅದರ ಮಾಲೀಕರು ಬಳಸಿಕೊಂಡ ಬಳಿಕ ಭಾರೀ ಜನಪ್ರಿಯತೆ ಪಡೆದಿತ್ತು. ತಮ್ಮ 30ರ ವಯೋಮಾನದಲ್ಲಿರುವ ಜರ್ಮನಿಯ ಇಬ್ಬರು ಈ ಇಲಿಯ ಮಾಲೀಕರಾಗಿದ್ದು, ಅವರೇ ಇಲಿಯ ಅಗಲಿಕೆಯ ಸುದ್ದಿಯನ್ನು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.
ಹೇರ್ ಕಟ್ ಮಾಡಿಸಲು ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ, ಪೊಲೀಸರಿಗೆ ದೂರು ನೀಡಿದ ತಾಯಿ
“ನಾವು ಈ ದಿನದ ಬಗ್ಗೆ ಬಹಳ ಭಯ ಇಟ್ಟುಕೊಂಡಿದ್ದೆವು. ಆದರೆ ಇಂದು ಹೀಗೆ ಆದ ಬಳಿಕ ನಿಜಕ್ಕೂ ಶಾಕ್ ಆಗಿದ್ದೇವೆ. ಬಹಳ ದುಃಖದಿಂದ ನಾವು ನಮ್ಮ ಪ್ರೀತಿಯ ಸ್ನೇಹಿತನ ಅಗಲಿಕೆಯನ್ನು ಘೋಷಿಸುತ್ತಿದ್ದೇವೆ,” ಎಂದು ಮಿ. ಗಾಕ್ಸ್‌ನ ಟ್ವಿಟರ್‌ಹ್ಯಾಂಡಲ್‌ನಲ್ಲಿ ತಿಳಿಸಲಾಗಿದೆ.
ಟ್ವಿಚ್‌ನಲ್ಲಿ ಲೈವ್ ಫೀಡ್ ಮಾಡಲಾಗುತ್ತಿದ್ದ ಮಿ. ಗಾಕ್ಸ್ ವಹಿವಾಟಿನ ವಿವರಗಳೆಲ್ಲವೂ ಆತನ ಟ್ವಿಟರ್ ಖಾತೆಯಲ್ಲಿ ಅಪ್ಡೇಟ್ ಆಗುತ್ತಿದ್ದವು.
ಗಾಕ್ಸ್‌ನ ಬೋನಿಗೆ ಚಕ್ರವೊಂದನ್ನು ಅಳವಡಿಸಲಾಗಿತ್ತು. ಆ ಚಕ್ರದ ಮೇಲೆ ಅನೇಕ ವಿಧದ ಕ್ರಿಪ್ಟೋಕರೆನ್ಸಿಗಳ ಹೆಸರುಗಳನ್ನು ಬರೆಯಲಾಗಿತ್ತು. ಗಾಕ್ಸ್ ಯಾವ ವಿಧದ ಕ್ರಿಪ್ಟೋಕರೆನ್ಸಿ ಮೇಲೆ ಓಡುತ್ತಿದ್ದನೋ ಆ ಡಿಜಿಟಲ್ ಕರೆನ್ಸಿಯನ್ನು ಮಾರುವುದು ಅಥವಾ ಕೊಳ್ಳುವುದನ್ನು ನಿರ್ಧರಿಸಲಾಗುತ್ತಿತ್ತು.