alex Certify ಹೇರ್‌ ಕಟ್ ಮಾಡಿಸಲು ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ, ಪೊಲೀಸರಿಗೆ ದೂರು ನೀಡಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇರ್‌ ಕಟ್ ಮಾಡಿಸಲು ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ, ಪೊಲೀಸರಿಗೆ ದೂರು ನೀಡಿದ ತಾಯಿ

ಕಾಮುಕರ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದೆ. ವೃದ್ಧರು, ಮಹಿಳೆಯರು, ಮಕ್ಕಳು ಎನ್ನುವ ಭೇದವಿಲ್ಲದೆಯೇ ಹೆಣ್ಣೊಬ್ಬಳು ಒಂಟಿಯಾಗಿ ಸಿಕ್ಕರೆ ಸಾಕು ಲೈಂಗಿಕ ಕಿರುಕುಳಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಇಂಥದ್ದೇ ಒಂದು ಪ್ರಕರಣ ಪುಣೆಯ ಪಿಂಪ್ರಿ-ಛಿಂಛ್ವಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ ನಡೆದಿದೆ.

8 ವರ್ಷದ ಬಾಲಕಿಯು ಛಿಕಾಳಿ ಎಂಬ ಪ್ರದೇಶದಲ್ಲಿ ತಲೆ ಕೂದಲು ಕತ್ತರಿಸುವ ಸೆಲೂನ್‌ಗೆ ತೆರಳಿದ್ದಾಳೆ. ಅದು ಕೂಡ ತನ್ನ ಅಜ್ಜಿಯ ಜತೆಗೆ. ಆದರೆ ಸೆಲೂನ್‌ ನಲ್ಲಿದ್ದ ಕೆಲಸಗಾರ ಕೂದಲು ಕತ್ತರಿಸುವ ನೆಪದಲ್ಲಿ ಬಾಲಕಿಗೆ ಅಸಹ್ಯಕರ ಎನಿಸುವಂತೆ ಲೈಂಗಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಸ್ವಲ್ಪ ಹೊತ್ತು ವಿರೋಧ ವ್ಯಕ್ತಪಡಿಸಿ ಸುಮ್ಮನೇ ಇದ್ದ ಬಾಲಕಿಯು, ಕೂಡಲೇ ಅಜ್ಜಿಯೊಂದಿಗೆ ಮನೆಗೆ ತೆರಳಿದ್ದಾಳೆ. ತನ್ನ ತಾಯಿಗೆ ಎಲ್ಲ ವೃತ್ತಾಂತ ತಿಳಿಸಿದ್ದಾಳೆ.

ಹೆಣ್ಮಕ್ಳೇ ಸ್ಟ್ರಾಂಗ್ ಗುರೂ….! ಸ್ಕರ್ಟ್ ಧರಿಸಿ ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ

ಕಾಮುಕರನ್ನು ಎಳೆಯ ಹಂತದಲ್ಲೇ ಚಿವುಟಿ ಹಾಕಬೇಕು ಎಂದು ಸಂಕಲ್ಪ ಮಾಡಿದ ಬಾಲಕಿಯ ತಾಯಿಯು ಸೀದಾ ಪೊಲೀಸ್ ಠಾಣೆಗೆ ತೆರಳಿ ಸೆಲೂನ್ ಕೆಲಸಗಾರನ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...