alex Certify ಕಡಿಮೆ ಸಂಪಾದನೆ ಮಾಡುವ ಮಹಿಳೆಯರು ಖರೀದಿಸಬಹುದು ಈ ವಾಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಸಂಪಾದನೆ ಮಾಡುವ ಮಹಿಳೆಯರು ಖರೀದಿಸಬಹುದು ಈ ವಾಹನ

कम पैसे कमाने वाली महिलाएं भी अब आसानी से खरीद सकेंगी टू-व्हीलर, PNB बैंक ने शुरू की खास स्कीम

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು  ಖರೀದಿಸಲು ಪಿಎನ್‌ಬಿ ಆರ್ಥಿಕ ನೆರವು ನೀಡುತ್ತದೆ. ಆದಾಯ ಮಾಸಿಕ 8000 ರೂಪಾಯಿಗಳಿದ್ರೂ ನೀವು ಸ್ಕೂಟಿ ಅಥವಾ ಬೈಕು ಖರೀದಿಸಬಹುದು. ಬ್ಯಾಂಕಿನ ವಿಶೇಷ ಯೋಜನೆಯ ಹೆಸರು ಪಿಎನ್‌ಬಿ ಪವರ್ ರೈಡ್.

ಈ ಯೋಜನೆಯಡಿ, ಅಗತ್ಯಕ್ಕೆ ತಕ್ಕಂತೆ ಹಣಕಾಸು ಲಭ್ಯವಿರುತ್ತದೆ. ಈ ಸಾಲದ ಗರಿಷ್ಠ ಮೊತ್ತ 60000 ರೂಪಾಯಿಗಳು. ಸಾಲವನ್ನು ಮರು ಪಾವತಿಸಲು ಗರಿಷ್ಠ 36 ತಿಂಗಳುಗಳನ್ನು ನೀಡಲಾಗುವುದು. ಪಿಎನ್‌ಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಕನಿಷ್ಠ 6 ತಿಂಗಳ ಉದ್ಯೋಗವನ್ನು ಪೂರ್ಣಗೊಳಿಸಿ, ಸಂಬಳ ಪಡೆಯುವ ಮಹಿಳೆ ಮತ್ತು 1 ವರ್ಷಕ್ಕಿಂತ ಹೆಚ್ಚು ಕಾಲ ಸ್ವಯಂ ಉದ್ಯೋಗಿಯಾಗಿರುವ ಮಹಿಳೆ ಈ ಯೋಜನೆಯ ಲಾಭವನ್ನು ಪಡೆಯಬಹುದು. ಹುಡುಗಿ ವಿದ್ಯಾರ್ಥಿನಿಯಾಗಿದ್ದರೆ, ಆಕೆ ತನ್ನ ಪೋಷಕರನ್ನು ಸಹ-ಸಾಲಗಾರನಾಗಿ ಮಾಡಬೇಕು. 18 ರಿಂದ 65 ವರ್ಷ ವಯಸ್ಸಿನ ಮಹಿಳೆಯರು ಇದ್ರ ಲಾಭ ಪಡೆಯಬಹುದು. ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...