ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ಖರೀದಿಸಲು ಪಿಎನ್‌ಬಿ ಆರ್ಥಿಕ ನೆರವು ನೀಡುತ್ತದೆ. ಆದಾಯ ಮಾಸಿಕ 8000 ರೂಪಾಯಿಗಳಿದ್ರೂ ನೀವು ಸ್ಕೂಟಿ ಅಥವಾ ಬೈಕು ಖರೀದಿಸಬಹುದು. ಬ್ಯಾಂಕಿನ ವಿಶೇಷ ಯೋಜನೆಯ ಹೆಸರು ಪಿಎನ್‌ಬಿ ಪವರ್ ರೈಡ್.
ಈ ಯೋಜನೆಯಡಿ, ಅಗತ್ಯಕ್ಕೆ ತಕ್ಕಂತೆ ಹಣಕಾಸು ಲಭ್ಯವಿರುತ್ತದೆ. ಈ ಸಾಲದ ಗರಿಷ್ಠ ಮೊತ್ತ 60000 ರೂಪಾಯಿಗಳು. ಸಾಲವನ್ನು ಮರು ಪಾವತಿಸಲು ಗರಿಷ್ಠ 36 ತಿಂಗಳುಗಳನ್ನು ನೀಡಲಾಗುವುದು. ಪಿಎನ್‌ಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಕನಿಷ್ಠ 6 ತಿಂಗಳ ಉದ್ಯೋಗವನ್ನು ಪೂರ್ಣಗೊಳಿಸಿ, ಸಂಬಳ ಪಡೆಯುವ ಮಹಿಳೆ ಮತ್ತು 1 ವರ್ಷಕ್ಕಿಂತ ಹೆಚ್ಚು ಕಾಲ ಸ್ವಯಂ ಉದ್ಯೋಗಿಯಾಗಿರುವ ಮಹಿಳೆ ಈ ಯೋಜನೆಯ ಲಾಭವನ್ನು ಪಡೆಯಬಹುದು. ಹುಡುಗಿ ವಿದ್ಯಾರ್ಥಿನಿಯಾಗಿದ್ದರೆ, ಆಕೆ ತನ್ನ ಪೋಷಕರನ್ನು ಸಹ-ಸಾಲಗಾರನಾಗಿ ಮಾಡಬೇಕು. 18 ರಿಂದ 65 ವರ್ಷ ವಯಸ್ಸಿನ ಮಹಿಳೆಯರು ಇದ್ರ ಲಾಭ ಪಡೆಯಬಹುದು. ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕು.