alex Certify ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪದಿದ್ದವರಿಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪದಿದ್ದವರಿಗೆ ಇಲ್ಲಿದೆ ಮಾಹಿತಿ

ರೈತರ ಅನುಕೂಲಕ್ಕೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯ 7ನೇ ಕಂತು ಬಿಡುಗಡೆಯಾಗಿದೆ. ಆದರೆ ದಾಖಲೆಗಳಲ್ಲಿನ ಸಣ್ಣಪುಟ್ಟ ದೋಷಗಳಿಂದಾಗಿ ಲಕ್ಷಾಂತರ ರೈತರಿಗೆ ಇನ್ನೂ ಈ ಹಣ ಸಿಕ್ಕಿಲ್ಲ.

ಅನೇಕ ರೈತರ ಪಾವತಿ ಪ್ರಕ್ರಿಯೆ ಬಾಕಿ ಉಳಿದಿದ್ದರೆ, ಇನ್ನೂ ಕೆಲವರಿಗೆ ಪಾವತಿ ಪ್ರಕ್ರಿಯೆ ಪೂರ್ಣವೇಗೊಂಡಿಲ್ಲ. ಆಧಾರ್​ ಸಂಖ್ಯೆ ಹಾಗೂ ಬ್ಯಾಂಕ್​ ಖಾತೆ ಸಂಖ್ಯೆಯ ತಪ್ಪಾದ ನೋಂದಣಿಯಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ.

ಅಂದಹಾಗೆ ನೀವು ಈ ಎಲ್ಲ ದೋಷಗಳನ್ನ ಬಹಳ ಸುಲಭವಾಗಿ ಸರಿ ಮಾಡಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನ ಅನುಸರಿಸಿ.

1. ಪಿಎಂ ಕಿಸಾನ್​ ವೆಬ್​ಸೈಟ್​​ಗೆ ಲಾಗಿನ್​ ಆಗಿ (pmkisan.gov.in.)

2. ಫಾರ್ಮರ್ಸ್​ ಕಾರ್ನರ್​ ಮೇಲೆ ಕಾಣುತ್ತಿರುವ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

3. ಈಗ ನಿಮಗೆ ಕಾಣಸಿಗುವ ಆಧಾರ್​ ಎಡಿಟ್​ ಎಂಬ ಆಯ್ಕೆ ಮೇಲೆ ಕ್ಲಿಕ್​ ಮಾಡಿ.

4. ಇಲ್ಲಿ ನಿಮ್ಮ ಆಧಾರ್​ ಸಂಖ್ಯೆಯನ್ನ ಪರಿಶೀಲನೆ ಮಾಡಲು ಹಾಗೂ ತಪ್ಪಾದ ಆಯ್ಕೆಯನ್ನ ಸರಿಪಡಿಸಲು ನಿಮಗೆ ಇಲ್ಲಿ ಅವಕಾಶ ಸಿಗುತ್ತದೆ.

ಇನ್ನು ನಿಮ್ಮ ಬ್ಯಾಂಕ್​ ಖಾತೆಯ ವಿವರಗಳು ತಪ್ಪಾಗಿದ್ರೂ ಸಹ ನೀವಿದನ್ನ ಸರಿಪಡಿಸಬಹುದು. ಆದರೆ ಇದಕ್ಕಾಗಿ ನೀವು ಹತ್ತಿರದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಬೇಕಾಗಬಹುದು. ಅಲ್ಲಿನ ಅಧಿಕಾರಿಗಳನ್ನ ಸಂಪರ್ಕಿಸೋದ್ರ ಮೂಲಕ ಬ್ಯಾಂಕ್​ ಖಾತೆಯ ವಿವರಗಳನ್ನ ಸರಿಪಡಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...