alex Certify ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ, ಹಣ ಬರದಿದ್ರೆ ಈ ಸಂಖ್ಯೆಗಳಿಗೆ ಕರೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ, ಹಣ ಬರದಿದ್ರೆ ಈ ಸಂಖ್ಯೆಗಳಿಗೆ ಕರೆ ಮಾಡಿ

PM Kisan 7th instalment: Lodge your complaint on these helpline numbers if your name is missing | Personal Finance News | Zee News

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಏಳನೇ ಕಂತಿನ ಪಾವತಿ ಪ್ರಕ್ರಿಯೆ ಆರಂಭಗೊಂಡಿದೆ. ದೇಶಾದ್ಯಂತ ಫಲಾನುಭವಿಗಳು ಈ ಕಂತಿನ ಪಾವತಿಯನ್ನು ಸ್ವೀಕರಿಸಲು ಆರಂಭಿಸಿದ್ದಾರೆ.

ಆಧಾರ್‌ ಲಿಂಕ್ ಆಗಿರುವ ತಮ್ಮ ಬ್ಯಾಂಕ್ ಖಾತೆಗಳೊಂದಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಸರಿಯಾಗಿ ಒದಗಿಸಿರುವ ರೈತರ ಖಾತೆಗಳಿಗೆ ಈ ದುಡ್ಡು ನೇರವಾಗಿ ರವಾನೆಯಾಗುತ್ತಿದೆ.

ವಿತ್ತೀಯ ವರ್ಷವೊಂದರಲ್ಲಿ ಮೂರು ಕಂತುಗಳ ಮೂಲಕ ಕಿಸಾನ್ ನಿಧಿಯನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಪಿಎಂ ಕಿಸಾನ್ ಜಾಲತಾಣಕ್ಕೆ ಭೇಟಿ ಕೊಡುವ ಮೂಲಕ ನೀವು ನಿಮ್ಮ ಹೆಸರು ನೋಂದಣಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ. ಹಣ ರವಾನೆ ಸಂಬಂಧ ಯಾವುದೇ ಕುಂದು ಕೊರತೆಗಳು ಕಂಡು ಬಂದಲ್ಲಿ ಪರಿಹರಿಸಿಕೊಳ್ಳಲೆಂದು ಹಾಟ್‌ಲೈನ್ ಸಂಖ್ಯೆಗಳ ಸರಣಿಯನ್ನೇ ಕೊಡಮಾಡಲಾಗಿದ್ದು, ನಿಮ್ಮ ದೂರನ್ನು ಈ ಸಂಖ್ಯೆಗಳಿಗೆ ದಾಖಲಿಸಬಹುದಾಗಿದೆ.

ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ — 18001155266; ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ — 155261; ಪಿಎಂ ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆ — 011- 23381092, 23382401 ಹಾಗೂ ಹೆಚ್ಚುವರಿ ಸಹಾಯವಾಣಿ ಸಂಖ್ಯೆ 0120-6025109ಗೆ ಕರೆ ಮಾಡಬಹುದಾಗಿದೆ. ಅಥವಾ ಪಿಎಂ ಕಿಸಾನ್ ಇ-ಮೇಲ್ ವಿಳಾಸವಾದ pmkisan-ict@gov.in ಗೆ ನಿಮ್ಮ ದೂರನ್ನು ಕಳುಹಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...