alex Certify ಸ್ವಂತ ಉದ್ಯಮ ಸ್ಥಾಪಿಸಲು ಮುಂದಾಗಿದ್ದೀರಾ…‌? ಹಾಗಾದರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಉದ್ಯಮ ಸ್ಥಾಪಿಸಲು ಮುಂದಾಗಿದ್ದೀರಾ…‌? ಹಾಗಾದರೆ ಈ ಸುದ್ದಿ ಓದಿ

ಕೆಲಸ ಬಿಟ್ಟು ವ್ಯಾಪಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಸರ್ಕಾರಿ ಯೋಜನೆ ಲಾಭವನ್ನು ಪಡೆಯಬಹುದು. ಈ ವ್ಯವಹಾರಕ್ಕೆ ಸರ್ಕಾರದಿಂದ ಸಹಾಯ ಸಿಗಲಿದೆ. ವ್ಯಾಪಾರ ಮಾಡಲು ಬಯಸುವವರು ಜನ ಔಷಧಿ ಕೇಂದ್ರವನ್ನು ಶುರು ಮಾಡಬಹುದು. ಇದನ್ನು ಯಾವುದೇ ಆಸ್ಪತ್ರೆ ಅಥವಾ ಮಾರುಕಟ್ಟೆಯಲ್ಲಿ ತೆರೆಯಬಹುದು. ಸರ್ಕಾರ ಜನ ಔಷಧಿ ಒದಗಿಸುತ್ತದೆ. ಇದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.

ಜನ ಔಷಧಿ ಕೇಂದ್ರ ತೆರೆಯಲು ಕೆಲವೊಂದು ಷರತ್ತುಗಳಿವೆ. ಮೊದಲ ವಿಭಾಗದಲ್ಲಿ ನಿರುದ್ಯೋಗಿಗಳು, ವೈದ್ಯರು, ನೋಂದಾಯಿತ ವೈದ್ಯಕೀಯ ತರಬೇತುದಾರರು ಅಂಗಡಿಯನ್ನು ತೆರೆಯಬಹುದು. ಎರಡನೇ ವರ್ಗವು ಟ್ರಸ್ಟ್, ಎನ್‌ಜಿಒ, ಖಾಸಗಿ ಆಸ್ಪತ್ರೆ, ಸೊಸೈಟಿ ಮತ್ತು ಸ್ವಸಹಾಯ ಗುಂಪಿನ ಅಡಿಯಲ್ಲಿ ಬರುತ್ತದೆ. ಮೂರನೇ ವಿಭಾಗದಲ್ಲಿ, ನಾಮನಿರ್ದೇಶಿತ ಸಂಸ್ಥೆ, ರಾಜ್ಯ ಸರ್ಕಾರದ ಪರವಾಗಿ ಮಳಿಗೆಯನ್ನು ತೆರೆಯಬಹುದು.

ಜನ ಔಷಧಿ ಕೇಂದ್ರ ತೆರೆಯಲು http://janaushadhi.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಸಿಇಒ, ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್ ಆಫ್ ಇಂಡಿಯಾ (ಬಿಪಿಪಿಐ), 8 ನೇ ಮಹಡಿ, ಬ್ಲಾಕ್ ಇ -1, ವಿಡಿಯೋಕಾನ್ ಟವರ್, ಖಂಡೇವಾಲನ್ ಎಕ್ಸ್ಟೆನ್ಷನ್ ನವದೆಹಲಿ -110055 ಗೆ ಕಳುಹಿಸಬೇಕು.

ಬೈಕ್‌ ಖರೀದಿದಾರರಿಗೆ ಬಿಗ್ ಶಾಕ್: ಸುಜುಕಿಯ ಮತ್ತೆರಡು ಮಾಡೆಲ್‌ ಗಳ ಬೆಲೆ ಏರಿಕೆ..!

ಜನ ಔಷಧಿ ಕೇಂದ್ರದ ಅಂಗಡಿ ಕನಿಷ್ಠ 120 ಚದರ ಅಡಿ ಇರಬೇಕು. ಜನ ಔಷಧಿ ಕೇಂದ್ರ ತೆರೆಯಲು ಸರ್ಕಾರ ಅನುಮೋದಿಸಿದರೆ, 650 ಕ್ಕೂ ಹೆಚ್ಚು ಔಷಧಿ, 100 ಕ್ಕೂ ಹೆಚ್ಚು ವೈದ್ಯಕೀಯ ಉಪಕರಣವನ್ನು ನೀಡಲಾಗುತ್ತದೆ. ಜನ ಔಷಧಿ ಕೇಂದ್ರ ತೆರೆಯಲು 2.5 ಲಕ್ಷ ರೂಪಾಯಿ ಅಗತ್ಯವಿದೆ. ಸರ್ಕಾರ ಇಷ್ಟೂ ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಜೊತೆಗೆ ಪ್ರೋತ್ಸಾಹ ಧನವನ್ನೂ ನೀಡುತ್ತದೆ. ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಔಷಧಿ ಮಾರಾಟ ಮಾಡಿದ್ರೆ 10 ಸಾವಿರ ರೂಪಾಯಿವರೆಗೆ ಪ್ರೋತ್ಸಾಹ ಧನ ಸಿಗುತ್ತದೆ. 1 ಲಕ್ಷ ರೂಪಾಯಿ ಮೌಲ್ಯದ ಔಷಧಿ ಮಾರಾಟ ಮಾಡಿದ್ರೆ 20 ಸಾವಿರ ಕಮಿಷನ್ ಜೊತೆ 10 ಸಾವಿರ ಪ್ರೋತ್ಸಾಹ ಧನ ಸೇರಿ 30 ಸಾವಿರ ರೂಪಾಯಿ ಆದಾಯ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...