ಭಾರತದಲ್ಲಿರುವ ರೂಪಾಂತರಿ ಕೊರೊನಾ ವೈರಸ್ ವಿರುದ್ಧ ನಮ್ಮ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಲಸಿಕಾ ಉತ್ಪಾದನಾ ಸಂಸ್ಥೆಯಾದ ಫೈಜರ್ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ಎರಡನೆ ಅಲೆ ಇಷ್ಟೊಂದು ಗಂಭೀರ ಪ್ರಮಾಣದಲ್ಲಿ ವ್ಯಾಪಿಸಲು ಈ ರೂಪಾಂತರಿ ವೈರಸ್ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಫೈಜರ್ ಲಸಿಕೆಯನ್ನ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಬಹುದಾಗಿದ್ದು ಭಾರತಕ್ಕೆ 5 ಕೋಟಿ ಲಸಿಕೆ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದೆ. ಹೀಗಾಗಿ ಕೇಂದ್ರ ಸರ್ಕಾರದ ಜೊತೆಗೆ ಫೈಜರ್ ಲಸಿಕೆಯ ತುರ್ತು ಅನುಮೋದನೆಗಾಗಿ ಲಸಿಕಾ ಉತ್ಪಾದನಾ ಸಂಸ್ಥೆ ಮಾತುಕತೆ ನಡೆಸುತ್ತಿದೆ.