alex Certify BIG SHOCKING NEWS: ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ – 11 ನೇ ದಿನವೂ ಗ್ರಾಹಕರಿಗೆ ಬರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING NEWS: ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ – 11 ನೇ ದಿನವೂ ಗ್ರಾಹಕರಿಗೆ ಬರೆ

ನವದೆಹಲಿ: 11ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲ ದರ ದಿನೇ ದಿನೇ ಭಾರೀ ದುಬಾರಿಯಾಗುತ್ತಿದೆ.

ಇಂದು ಪೆಟ್ರೋಲ್ ಪ್ರತಿ ಲೀಟರ್ ಗೆ 31 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 33 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ದೈನಂದಿನ ದರ ಪರಿಷ್ಕರಣೆ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 90.19 ರೂಪಾಯಿ, ಡೀಸೆಲ್ 80.60 ರೂಪಾಯಿ ಇದೆ.

ದೈನಂದಿನ ದರ ಪರಿಷ್ಕರಣೆ ನಂತರ ತೆರಿಗೆ, ಸಾಗಣೆ ವೆಚ್ಚ ಮೊದಲಾದವುಗಳಿಂದಾಗಿ ಆಯಾ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿರುತ್ತದೆ. ಹಲವು ಕಡೆ ಪೆಟ್ರೋಲ್ ದರ ಲೀಟರ್ ಗೆ 100 ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...