alex Certify BIG BREAKING: ದೇಶಾದ್ಯಂತ ಸತತ 4 ನೇ ದಿನವೂ ಮುಂದುವರೆದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದೇಶಾದ್ಯಂತ ಸತತ 4 ನೇ ದಿನವೂ ಮುಂದುವರೆದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಸತತ ನಾಲ್ಕನೇ ದಿನವಾದ ಭಾನುವಾರವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರಿದಿದೆ.

ದೆಹಲಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 35 ಪೈಸೆಯಷ್ಟು ಏರಿಕೆಯಾಗಿ 105.84 ರೂ. ಮತ್ತು 94.57 ರೂ.ಗೆ ಏರಿಸಲಾಗಿದೆ. ಸತತ ನಾಲ್ಕನೇ ದಿನ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 35 ಪೈಸೆಯಷ್ಟು ಹೆಚ್ಚಿಸಲಾಗಿದೆ.

ಮುಂಬೈನಲ್ಲಿ, ಪೆಟ್ರೋಲ್ ಬೆಲೆ 34 ಪೈಸೆ ಹೆಚ್ಚಳವಾಗಿ 111.77 ರೂ.ಗೆ ತಲುಪಿದೆ. ಡೀಸೆಲ್ ಬೆಲೆ 37 ಪೈಸೆ ಹೆಚ್ಚಳವಾಗಿದ್ದು, 102.52 ರೂ.ಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 106.43 ರೂ. ಮತ್ತು 97.68 ರೂ.ಇದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 109.53 ರೂ. ಮತ್ತು ಡೀಸೆಲ್ 100.37 ರೂ.

ಹೈದರಾಬಾದ್‌ನಲ್ಲಿ ಪೆಟ್ರೋಲ್ 110.09 ರೂ., ಡೀಸೆಲ್ ಬೆಲೆ 103.08 ರೂ. ಆಗಿದೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ದರ ಪರಿಷ್ಕರಣೆಯಲ್ಲಿ ಮೂರು ವಾರಗಳ ಸುದೀರ್ಘ ವಿರಾಮದ ನಂತರ ಇದು ಪೆಟ್ರೋಲ್ ಬೆಲೆಯಲ್ಲಿ 16 ನೇ ಬಾರಿ ಮತ್ತು ಡೀಸೆಲ್ ಬೆಲೆಯಲ್ಲಿ 19 ನೇ ಬಾರಿಗೆ ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...