ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಕೂಡ ಏರಿಕೆಯಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 80 ಪೈಸೆ ಏರಿಕೆಯಾಗಿ 101.01 ರೂಪಾಯಿಗೆ ತಲುಪಿದೆ. ಡೀಸೆಲ್ ದರ 80 ಪೈಸೆಯಷ್ಟು ಏರಿಕೆ ಕಂಡಿದ್ದು, 92.27 ರೂಪಾಯಿ ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 84 ಪೈಸೆ, ಡೀಸೆಲ್ ಬೆಲೆ 85 ಪೈಸೆ ಏರಿಕೆಯಾಗಿದ್ದು, ಕ್ರಮವಾಗಿ 115.88 ರೂ., 100.10 ರೂಪಾಯಿಗೆ ತಲುಪಿದೆ.
ಅದೇ ರೀತಿ ಚೆನ್ನೈನಲ್ಲಿ ಪೆಟ್ರೋಲ್ 75 ಪೈಸೆ ಮತ್ತು ಡೀಸೆಲ್ 76 ಪೈಸೆ ಏರಿಕೆಯಾಗಿದ್ದು, 106.68 ರೂ., 96.76 ರೂಪಾಯಿಗೆ ತಲುಪಿದೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ 84 ಹಾಗೂ ಡೀಸೆಲ್ 80 ಪೈಸೆ ಏರಿಕೆಯಾಗಿದ್ದು, 110.52, 95.42 ರೂಪಾಯಿಗೆ ತಲುಪಿದೆ.
ಬುಧವಾರ ಪೆಟ್ರೋಲ್ ಬೆಲೆ ಲೀಟರ್ ಗೆ 80 ಪೈಸೆ ಮತ್ತು ಡೀಸೆಲ್ ಗೆ 80 ಪೈಸೆ ಏರಿಕೆಯಾಗಿದೆ, ಕಳೆದ ಒಂದು ವಾರದಲ್ಲಿ ಲೀಟರ್‌ಗೆ 5.60 ರೂ. ಏರಿಕೆಯಾಗಿದೆ. ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ದೀರ್ಘಾವಧಿಯ ವಿರಾಮದ ಅಂತ್ಯದ ನಂತರ ಬೆಲೆಗಳಲ್ಲಿ ಇದು ಒಂಬತ್ತನೇ ಹೆಚ್ಚಳವಾಗಿದೆ.