
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ. ಸತತ ಐದನೇ ಬಾರಿಗೆ ದರ ಏರಿಕೆ ಬಳಿಕ ಇಂಧನ ಬೆಲೆಗಳು ಹೊಸ ಗರಿಷ್ಠಕ್ಕೆ ತಲುಪಿವೆ.
ಇಂದು ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಿವೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 109.34 ರೂ.ಗೆ ತಲುಪಿದೆ ಮತ್ತು ಡೀಸೆಲ್ ದರ ಲೀಟರ್‌ಗೆ 98.07 ರೂ.ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ 115.15 ಮತ್ತು 106.23 ರೂ. ಆಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಡೀಸೆಲ್ ದರ ಕೋಲ್ಕತ್ತಾದಲ್ಲಿ 109.79 ರೂ. ಮತ್ತು 101.19 ರೂ. ಇದೆ.
ಮಧ್ಯಪ್ರದೇಶದ ಗಡಿ ಜಿಲ್ಲೆಯಲ್ಲಿ ಪೆಟ್ರೋಲ್ ದರ 121 ರೂಪಾಯಿ ಗಡಿ ದಾಟಿದೆ. ಕಳೆದ 37 ದಿನಗಳಲ್ಲಿ 29 ದಿನಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 9.55 ರೂ. ಜಾಸ್ತಿಯಾಗಿದೆ.
ಪೆಟ್ರೋಲ್ ಬೆಲೆಯು ಹಿಂದಿನ 33 ದಿನಗಳಲ್ಲಿ 26 ರಂದು ಏರಿಕೆಯಾಗಿದೆ, ಲೀಟರ್‌ಗೆ 8.15 ರೂ. ಹೆಚ್ಚಳವಾಗಿದೆ.