alex Certify BREAKING: 10 ದಿನದಲ್ಲಿ 9 ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ; 6.40 ರೂ. ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: 10 ದಿನದಲ್ಲಿ 9 ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ; 6.40 ರೂ. ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ ಒಟ್ಟು ದರಗಳು ಲೀಟರ್‌ ಗೆ 6.40 ಕ್ಕೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 101.01 ರಿಂದ 101.81 ರೂ.ಆಗಲಿದೆ. ಡೀಸೆಲ್ ದರ ಇಂದು ಲೀಟರ್‌ ಗೆ 92.27 ರಿಂದ 93.07 ರೂ.ಗೆ ಏರಿಕೆಯಾಗಿದೆ.

ಮುಂಬೈನಲ್ಲಿ 84 ಪೈಸೆ ಏರಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ  116.72 ಮತ್ತು 100.94 ರೂ.ಗೆ ತಲುಪಿದೆ.

ದೇಶಾದ್ಯಂತ ತೈಲ ದರಗಳನ್ನು ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆಯ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಬದಲಾಗುತ್ತದೆ. ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ನಂತರ ಮಾರ್ಚ್ 22 ರಂದು ಅಂತ್ಯಗೊಂಡ ಬೆಲೆಯಲ್ಲಿ ಇದು 9 ನೇ ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...