alex Certify BREAKING: ಯುಗಾದಿ ದಿನವೇ ಶಾಕಿಂಗ್ ನ್ಯೂಸ್; ಇಂದೂ ಪೆಟ್ರೋಲ್, ಡೀಸೆಲ್ ದರ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಯುಗಾದಿ ದಿನವೇ ಶಾಕಿಂಗ್ ನ್ಯೂಸ್; ಇಂದೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ: ಯುಗಾದಿ ದಿನವೂ ದೇಶದ ಜನತೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು, ನಿನ್ನೆ ಬಿಡುವಿನ ನಂತರ ಇಂದು ಮತ್ತೆ ದರ ಪರಿಷ್ಕರಣೆ ಮಾಡಲಾಗಿದೆ.

ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 80 ಪೈಸೆ ಏರಿಕೆ ಮಾಡಲಾಗಿದ್ದು, 102.61 ರೂ.ಗೆ ತಲುಪಿದೆ. ಡೀಸೆಲ್ ದರ ಕೂಡ 80 ಪೈಸೆ ಏರಿಕೆಯಾಗಿದ್ದು 93.87 ರೂ.ಗೆ ತಲುಪಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್ 84 ಪೈಸೆ, ಡೀಸೆಲ್ 80 ಪೈಸೆ ಹೆಚ್ಚಳವಾಗಿದ್ದು, ಕ್ರಮವಾಗಿ 112.19 ರೂ., 97.02 ರೂ.ಗೆ ತಲುಪಿದೆ.

ತೆರಿಗೆ ಮತ್ತು ಸಾಗಣೆ ವೆಚ್ಚ ಸೇರಿ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ವ್ಯತ್ಯಾಸವಾಗುತ್ತದೆ. 12 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸುಮಾರು 7.50 ರೂ.ನಷ್ಟು ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...