alex Certify BREAKING: ಹಬ್ಬದ ಮರುದಿನವೂ ಶಾಕಿಂಗ್ ನ್ಯೂಸ್; ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ; 13 ದಿನದಲ್ಲಿ 8 ರೂ. ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹಬ್ಬದ ಮರುದಿನವೂ ಶಾಕಿಂಗ್ ನ್ಯೂಸ್; ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ; 13 ದಿನದಲ್ಲಿ 8 ರೂ. ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇವತ್ತು ಕೂಡ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 80 ಪೈಸೆ ಏರಿಕೆಯಾಗಿದ್ದು, 103.1 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್ ಗೆ 80 ಪೈಸೆಯಷ್ಟು ಏರಿಕೆಯಾಗಿ 94.67 ರೂ.ಗೆ ಮಾರಾವಾಗುತ್ತಿದೆ.

ಮುಂಬೈನಲ್ಲಿ ಪೆಟ್ರೋಲ್ 84 ಪೈಸೆ, ಡೀಸೆಲ್ 85 ಪೈಸೆ ಏರಿಕೆಯಾಗಿದೆ. ಕ್ರಮವಾಗಿ 118.41 ರೂ., 102.64 ರೂಪಾಯಿ ಇದೆ.

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 75 ಪೈಸೆಯಷ್ಟು ಏರಿಕೆಯಾಗಿದೆ. ಪೆಟ್ರೋಲ್ ದರ 108.96 ರೂ., ಡೀಸೆಲ್ ದರ 99.0 4 ರೂಪಾಯಿ ಇದೆ.

ಕೊಲ್ಕತ್ತಾ ಮಹಾನಗರದಲ್ಲಿ ಪೆಟ್ರೋಲ್ 84 ಪೈಸೆ, ಡಿಸೇಲ್ ದರ 80 ಪೈಸೆಯಷ್ಟು ಏರಿಕೆಯಾಗಿದೆ. ಪೆಟ್ರೋಲ್ ದರ 113.03 ರೂ., ಡೀಸೆಲ್ ದರ 97.82 ರೂಪಾಯಿ ಇದೆ.

ಸ್ಥಳೀಯ ತೆರಿಗೆ ಮತ್ತು ಸಾಗಣೆ ವೆಚ್ಚಗಳಿಂದಾಗಿ ಆಯಾ ಪ್ರದೇಶಗಳಲ್ಲಿ ತೈಲ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಇತ್ತೀಚಿನ ದರ ಪರಿಷ್ಕರಣೆ ನಂತರ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ ಕಳೆದ 13 ದಿನಗಳಲ್ಲಿ 8 ರೂ. ನಷ್ಟು ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...