alex Certify BREAKING: ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ದುಬಾರಿಯಾದ ತೈಲ ದರ; ಇಂದೂ ಮುಂದುವರೆದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ದುಬಾರಿಯಾದ ತೈಲ ದರ; ಇಂದೂ ಮುಂದುವರೆದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರವನ್ನು 85 ಪೈಸೆ ಏರಿಕೆ ಮಾಡಲಾಗಿದೆ. ದರ ಪರಿಷ್ಕರಣೆ ನಂತರ ಒಂದು ಲೀಟರ್ ಪೆಟ್ರೋಲ್ 100.21 ರೂಪಾಯಿ ಆಗಿದೆ. ಡೀಸೆಲ್ ದರವನ್ನು 70 ಪೈಸೆ ಏರಿಕೆ ಮಾಡಲಾಗಿದ್ದು, ಒಂದು ಲೀಟರ್ ಡೀಸೆಲ್ ದರ 91.47 ರೂಪಾಯಿ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ 85 ಪೈಸೆ, ಡೀಸೆಲ್ 75 ಪೈಸೆ ಏರಿಕೆ ಮಾಡಲಾಗಿದೆ. ಕ್ರಮವಾಗಿ ಪೆಟ್ರೋಲ್ ದರ 115.04 ರೂ., ಡೀಸೆಲ್ ದರ 99.35 ರೂಪಾಯಿ ಆಗಿದೆ

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 76 ಪೈಸೆ ಮತ್ತು 67 ಪೈಸೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ದರ 105. 94 ರೂ., ಡೀಸೆಲ್ ದರ 96 ರೂಪಾಯಿ ಇದೆ.

ಕೊಲ್ಕೊತ್ತಾದ ಪೆಟ್ರೋಲ್ 83 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದ್ದು, ಕ್ರಮವಾಗಿ 109.68 ರೂ., 94.62 ರೂ ಇದೆ.

ಒಂದು ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 5 ರೂ.ನಷ್ಟು ಏರಿಕೆಯಾಗಿದೆ. ಸ್ಥಳೀಯ ಮಾರಾಟ ತೆರಿಗೆ, ಸಾಗಣೆ ವೆಚ್ಚ ಮೊದಲಾದವುಗಳಿಂದ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಬದಲಾವಣೆಯಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...