alex Certify BIG NEWS: ಪೆಟ್ರೋಲ್ 2.45 ರೂ., ಡೀಸೆಲ್ 2.78 ರೂ. ಏರಿಕೆ – ಮೇ ನಲ್ಲಿ 10 ಬಾರಿ ದರ ಹೆಚ್ಚಳ –ಇಂದು ಯಥಾಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೆಟ್ರೋಲ್ 2.45 ರೂ., ಡೀಸೆಲ್ 2.78 ರೂ. ಏರಿಕೆ – ಮೇ ನಲ್ಲಿ 10 ಬಾರಿ ದರ ಹೆಚ್ಚಳ –ಇಂದು ಯಥಾಸ್ಥಿತಿ

ನವದೆಹಲಿ: ಮೇ ತಿಂಗಳಲ್ಲಿ ಬರೋಬ್ಬರಿ 10 ಸಲ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ. ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾವಣೆ ಆಗಿಲ್ಲ.

ಮೇ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ 2.45 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರಿಗೆ 2.78 ರೂಪಾಯಿ ಏರಿಕೆಯಾಗಿದೆ. ಮೇ 19 ರಂದು ಇಂಧನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಮೇ ತಿಂಗಳಲ್ಲಿ 10 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 92.85 ರೂ., ಡೀಸೆಲ್ 83.51 ರೂ., ಮುಂಬೈನಲ್ಲಿ 99.14 ರೂಪಾಯಿ, ಡೀಸೆಲ್ 90.71 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ದರ 100 ರೂ. ಸನಿಹದಲ್ಲಿದೆ. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ದೇಶದಲ್ಲಿಯೇ ಅತಿಹೆಚ್ಚು ದರ ಇದೆ. ಪೆಟ್ರೋಲ್ 103.80 ರೂಪಾಯಿ, ಡೀಸೆಲ್ 96.30 ರೂಪಾಯಿ ಇದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್(ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಹೆಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸುತ್ತವೆ. ಸದ್ಯ ಕಚ್ಚಾತೈಲದ ಬೆಲೆ ಕಡಿಮೆಯಾಗುತ್ತಿದ್ದರೂ, ದೇಶಿಯ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...