ದೇಶದ ಬೃಹತ್ ಡೈರಿ ಕಂಪನಿ ಅಮುಲ್ ಹಾಗೂ ಪ್ರಾಣಿ ಹಿತರಕ್ಷಣಾ ವೇದಿಕೆ ಪೇಟಾ ನಡುವೆ ಸಣ್ಣ ವಿವಾದದ ಕಿಡಿಯೊಂದು ಹೊತ್ತಿಕೊಂಡಿದೆ. ಅಮುಲ್ ಡೈರಿಯ ಉತ್ಪನ್ನಗಳ ಬಗ್ಗೆ ಆಕ್ಷೇಪವನ್ನೆತ್ತಿದ್ದ ಪೇಟಾ, ಪ್ಲಾಂಟ್ ಬೇಸ್ಡ್ ಡೈರಿ ಪ್ರಾಡಕ್ಟ್ನತ್ತ ಸ್ವಿಚ್ ಆಗಬೇಕು ಎಂದು ಹೇಳಿತ್ತು. ಅಮುಲ್ನ ಎಂಡಿ ಆರ್, ಸೋಧಿಗೆ ಈ ಸಂಬಂಧ ಪತ್ರ ಬರೆದಿರುವ ಪೇಟಾ, ಈ ರೀತಿ ಪ್ಲಾಂಟ್ ಬೇಸ್ಡ್ ಡೈರಿ ಪ್ರಾಡಕ್ಟ್ಗೆ ಬದಲಾಗುವಂತೆ ಹೇಳಿತ್ತು.
ಅಶ್ವಿನಿ ಮಹಾಜನ್ರ ಟ್ವೀಟ್ಗೆ ತುಸು ಖಾರವಾಗೇ ಪ್ರತಿಕ್ರಿಯಿಸಿದ ಆರ್.ಎಸ್. ಸೋಧಿ, ಡೈರಿ ಉತ್ಪನ್ನಗಳನ್ನ ತಯಾರಿಸುವ ಎಷ್ಟೋ ರೈತರ ಬಳಿ ಸ್ವಂತ ಜಾಗ ಇರೋದಿಲ್ಲ. ನಿಮ್ಮ ಈ ಐಡಿಯಾದಿಂದ ಇವರ ಏಕೈಕ ಆದಾಯದ ಮೂಲ ಕೂಡ ಬಂದ್ ಆಗಬಹುದು. ನೆನಪಿನಲ್ಲಿಡಿ ಹಾಲು ನಮ್ಮ ಸಂಪ್ರದಾಯ, ನಮ್ಮ ರುಚಿ ಹಾಗೂ ನಮ್ಮ ಆಹಾರವಾಗಿದೆ. ಅಲ್ಲದೇ ಹಾಲಿನಲ್ಲಿ ಅಗಾಧ ಪ್ರಮಾಣದ ಪೋಷಕಾಂಶ ಅಡಗಿದೆ ಎಂದು ಹೇಳಿದ್ದಾರೆ.
ಇನ್ನು ಪೇಟಾ ವೆಗಾನ್ ಮಿಲ್ಕ್ ಬಗ್ಗೆ ನೀಡಿದ್ದ ಅಭಿಪ್ರಾಯ ಸಂಬಂಧಿಸಿದ ಸುದ್ದಿಗೆ ಕೂಡ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ ಸೋಧಿ, 100 ಮಿಲಿಯನ್ಗೂ ಅಧಿಕ ರೈತರ ಜೀವನ ಹಾಗೂ ಕಳೆದ 75 ವರ್ಷಗಳಲ್ಲಿ ರೈತರ ಹಣದಿಂದ ನಿರ್ಮಿಸಲಾದ ಈ ಸಂಪನ್ಮೂಲವನ್ನ ಪೇಟಾ ಮಧ್ಯಮ ವರ್ಗದ ಜನರು ಭರಿಸಲು ಸಾಧ್ಯವಾಗದ ಎಂಎನ್ಸಿಯಾಗಿ ಮಾರ್ಪಾಡಿಸಲು ಹೊರಟಿದೆ ಎಂದು ಕುಟುಕಿದ್ದಾರೆ.