ನವದೆಹಲಿ: ಪಿಂಚಣಿ ವಿತರಣೆಗೆ ಕೇಂದ್ರೀಯ ವ್ಯವಸ್ಥೆ ರಚಿಸಲು ಕಾರ್ಮಿಕರ ಭವಿಷ್ಯನಿಧಿ ಕಚೇರಿ ಮುಂದಾಗಿದೆ. 73 ಲಕ್ಷ ನಿವೃತ್ತರ ಬ್ಯಾಂಕ್ ಖಾತೆಗೆ ಏಕಕಾಲದಲ್ಲಿ ಪಿಂಚಣಿ ಜಮೆ ಮಾಡಲಾಗುತ್ತದೆ.
ಪ್ರಸ್ತುತ 138 ಪ್ರಾದೇಶಿಕ ಕಚೇರಿಗಳ ಮೂಲಕ ಪಿಂಚಣಿ ಬಟವಾಡೆಯಾಗುತ್ತಿದ್ದು, ಒಂದೊಂದು ಕಡೆ ಒಂದೊಂದು ದಿನ ಪಿಂಚಣಿದಾರರ ಖಾತೆಗೆ ಪಿಂಚಣಿ ಜಮಾ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಕಚೇರಿಯಿಂದ ಶೀಘ್ರದಲ್ಲಿಯೇ ಪಿಂಚಣಿ ಬಟವಾಡೆಗೆ ಕೇಂದ್ರೀಯ ವ್ಯವಸ್ಥೆಯನ್ನು ರಚಿಸಲಿದ್ದು, ಏಕಕಾಲದಲ್ಲಿ 73 ಲಕ್ಷ ಪಿಂಚಣಿದಾರರಿಗೆ ಪಿಂಚಣಿ ಜಮಾ ಮಾಡಲಾಗುವುದು.
ಜುಲೈ 29, 30ರಂದು ಕೇಂದ್ರೀಯ ಟ್ರಸ್ಟ್ ಮಂಡಳಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಿಂಚಣಿ ವಿತರಣೆಗೆ ಕೇಂದ್ರೀಯ ವ್ಯವಸ್ಥೆ ಜಾರಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.