ದೇಶದ ಪ್ರಮುಖ ಡಿಜಿಟಲ್ ಫೈನಾನ್ಷಿಯಲ್ ಸರ್ವೀಸಸ್ ಪ್ಲಾಟ್‌ಫಾರ್ಮ್ ಪೇಟಿಎಂ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಐಪಿಎಲ್ ಸಂದರ್ಭದಲ್ಲಿ ಡಿಟಿಎಚ್ ರೀಚಾರ್ಜ್‌ಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಿದೆ. ಪೇಟಿಎಂ ಇದಕ್ಕೆ 2 ಪೇ 200 ಕ್ಯಾಶ್‌ಬ್ಯಾಕ್ ಎಂದು ಹೆಸರಿಟ್ಟಿದೆ.
ಐಪಿಎಲ್‌ನ ಎರಡು ತಿಂಗಳ ಅವಧಿಯಲ್ಲಿ ಬಳಕೆದಾರರು ಡಿಟಿಎಚ್ ರೀಚಾರ್ಜ್ ಮಾಡಿದ್ರೆ ಭರ್ಜರಿ ಕ್ಯಾಶ್‌ಬ್ಯಾಕ್ ಸಿಗಲಿದೆ. 2 ಪೇ 200 ಕ್ಯಾಶ್‌ಬ್ಯಾಕ್’ ಆಫರ್ ಪಡೆಯಲು ಹೊಸ ಬಳಕೆದಾರರು ಸತತ ಎರಡು ತಿಂಗಳಲ್ಲಿ 100 ರೂಪಾಯಿಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಏರ್ಟೆಲ್ ಡಿಜಿಟಲ್ ಟಿವಿ, ಟಾಟಾ ಸ್ಕೈ, ಡಿಶ್ ಟಿವಿ, ವಿಡಿಯೋಕಾನ್ ಡಿ 2 ಹೆಚ್ ಮತ್ತು ಸನ್ ಡೈರೆಕ್ಟ್ ಎಲ್ಲಾ ಪ್ರಿಪೇಯ್ಡ್ ಯೋಜನೆಗೆ ರಿಚಾರ್ಜ್ ಮಾಡಿದ್ರೆ ಈ ಕ್ಯಾಶ್ಬ್ಯಾಕ್ ಸಿಗಲಿದೆ.
ಪೇಟಿಎಂ ತನ್ನ ಗ್ರಾಹಕರಿಗೆ ಪೇಟಿಎಂ ಯುಪಿಐ, ಪೇಟಿಎಂ ವಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮೋಡ್ ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಬಳಕೆದಾರರು ಪೋಸ್ಟ್ ಪೇಯ್ಡ್ ವೈಶಿಷ್ಟ್ಯದ ಲಾಭವನ್ನು ಸಹ ಪಡೆಯಬಹುದು.