alex Certify ಪತಂಜಲಿ ಆರ್ಯುವೇದ ಸಂಸ್ಥೆ ಲಾಭದಲ್ಲಿ ಭಾರೀ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಂಜಲಿ ಆರ್ಯುವೇದ ಸಂಸ್ಥೆ ಲಾಭದಲ್ಲಿ ಭಾರೀ ಏರಿಕೆ

ಬಾಬಾ ರಾಮ್​ದೇವರ ಪತಂಜಲಿ ಆರ್ಯುವೇದ ಲಿಮಿಟೆಡ್​ 2019-20ರ ಹಣಕಾಸು ವರ್ಷದ ಸ್ವತಂತ್ರ ನಿವ್ವಳ ಲಾಭದಲ್ಲಿ ಶೇಕಡಾ 21.56ರಷ್ಟು ಹೆಚ್ಚಿನ ಲಾಭ ಗಳಿಸುವ ಮೂಲಕ 424.75 ಕೋಟಿ ಸಂಪಾದಿಸಿದೆ ಅಂತಾ ವ್ಯಾಪಾರ ಗುಪ್ತಚರ ವೇದಿಕೆ ಮಾಹಿತಿ ನೀಡಿದೆ.

ಪತಂಜಲಿ 2018-19ರ ಆರ್ಥಿಕ ವರ್ಷದಲ್ಲಿ 349.37 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. 2020ರ ಮಾರ್ಚ್​ 31ಕ್ಕೆ ಕೊನೆಯಾದ ಹಣಕಾಸು ವರ್ಷದಲ್ಲಿ ಕಂಪನಿ ಆದಾಯ ಶೇಕಡಾ 5.86ರಷ್ಟು ಏರಿಕೆಯಾಗಿದೆ. 2019-20ರ ಹಣಕಾಸು ವರ್ಷದಲ್ಲಿ ಪತಂಜಲಿ 9087.91 ಕೋಟಿ ರೂಪಾಯಿ ಒಟ್ಟು ಆದಾಯ ಗಳಿಸಿದೆ.

ಈ ವಿಚಾರವಾಗಿ ಮಾತನಾಡಿದ ಬಾಬಾ ರಾಮದೇವ್, ಕಳೆದ ಹಣಕಾಸು ವರ್ಷ ನಮಗೆ ಬಹಳ ಸವಾಲಿನದ್ದಾಗಿತ್ತು. ಆರ್ಥಿಕ ಹೊಡೆತಗಳ ಹೊರತಾಗಿಯೂ ನಾವು ತಡೆರಹಿತ ಕೆಲಸ ಮಾಡಿದ್ದೇವೆ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...