ಪ್ರಮುಖ ಹಣಕಾಸು ವಹಿವಾಟು ನಡೆಸಲು ಪಾನ್ ಕಾರ್ಡ್ ಅನಿವಾರ್ಯವಾಗಿದೆ. ಇದು ಒಂದು ಪ್ರಮುಖ ದಾಖಲೆ. 50 ಸಾವಿರ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಲು ಪಾನ್ ಕಾರ್ಡ್ ನೀಡುವುದು ಅಗತ್ಯ.
ಈ ಪಾನ್ ಕಾರ್ಡ್ ಕಳೆದು ಹೋದ್ರೆ ಚಿಂತೆ ಪಡಬೇಕಾಗಿಲ್ಲ. ನಕಲು ಪಾನ್ ಕಾರ್ಡ್ ಗೆ ನೀವು ಅರ್ಜಿ ಸಲ್ಲಿಸಬಹುದು. ನಿಮ್ಮ ಬಳಿ ಮೊದಲೇ ಪಾನ್ ಕಾರ್ಡ್ ಇದ್ದು, ಅದು ಕಳೆದು ಹೋಗಿದ್ದಲ್ಲಿ ಮಾತ್ರ ನಕಲು ಪಾನ್ ಕಾರ್ಡ್ ಪಡೆಯಲು ಸಾಧ್ಯ.
ಪಾನ್ ಕಾರ್ಡ್ ನ ಯಾವುದೇ ಮಾಹಿತಿಯನ್ನು ನವೀಕರಿಸಲು ಸಾಧ್ಯವಿಲ್ಲ. ಹೆಸರು, ವಿಳಾಸ ಇತ್ಯಾದಿಗಳನ್ನು ನವೀಕರಿಸಲು ಸಾಧ್ಯವಿಲ್ಲ. ನಕಲು ಪಾನ್ ಕಾರ್ಡ್ ನ್ನು ಕೂಡ ನೀವು ನೀಡಿದ ವಿಳಾಸಕ್ಕೆ ರವಾನಿಸಲಾಗುತ್ತದೆ. ನಕಲು ಪಾನ್ ಕಾರ್ಡ್ ಪಡೆಯಲು ನೀವು ಮೊದಲು https://www.tin-nsdl.com/ ವೆಬ್ಸೈಟ್ ಗೆ ಹೋಗಬೇಕು.
ಅಲ್ಲಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಈ ವೆಬ್ಸೈಟ್ ನ ಮುಖಪುಟದಲ್ಲಿ ಮರು ಮುದ್ರಣ ಆಯ್ಕೆಯನ್ನು ಕ್ಲಿಕ್ ಮಾಡಿ. ಮುಖಪುಟದಲ್ಲಿ ಈ ಲಿಂಕ್ ಸಿಗದಿದ್ದಲ್ಲಿ ಸರ್ವೀಸ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಮರು ಮುದ್ರಣ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತ್ರ ನಿಮಗೆ Reprint of PAN Card ಆಯ್ಕೆ ಸಿಗಲಿದೆ. ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ವೆಬ್ ಪುಟ ತೆರೆಯುತ್ತದೆ. ಅಲ್ಲಿ ಪಾನ್ ಕಾರ್ಡ್, ಆಧಾರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು. ಒಟಿಪಿಗಾಗಿ ನೀವು ಇ-ಮೇಲ್ ಅಥವಾ ಮೊಬೈಲ್ ನಂಬರ್ ನೀಡಬೇಕು.