alex Certify ಗಮನಿಸಿ: ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲವೆಂದ್ರೆ ನಿಲ್ಲುತ್ತೆ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲವೆಂದ್ರೆ ನಿಲ್ಲುತ್ತೆ ಈ ಕೆಲಸ

Income tax norms changed; quoting father's name in PAN ...

ಪ್ರತಿಯೊಬ್ಬರೂ ತಮ್ಮ ಅಗತ್ಯ ದಾಖಲೆಗಳನ್ನು ಎಲ್ಲಾ ಸಮಯದಲ್ಲೂ ಸಿದ್ಧವಾಗಿಡಬೇಕು. ಇಂದಿನ ಸಮಯದಲ್ಲಿ ಯಾವುದೇ ಹಣಕಾಸು ಅಥವಾ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳಿಗೆ ಪಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ.

ಪಾನ್ ಕಾರ್ಡ್ ಇಲ್ಲದ ಕಾರಣ ಅನೇಕ ಬಾರಿ ಅಗತ್ಯ ಕೆಲಸ ನಿಲ್ಲುತ್ತದೆ. ಪಾನ್ ಕಾರ್ಡ್ 10 ಅಂಕಿಯ ಸಂಖ್ಯೆಯಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ.

5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸ್ಥಿರ ಆಸ್ತಿಯನ್ನು ಖರೀದಿಸಲು ಪಾನ್ ಕಾರ್ಡ್ ನೀಡುವುದು ಕಡ್ಡಾಯ. ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಪಾನ್ ಸಂಖ್ಯೆಯನ್ನು ನೀಡಬೇಕು.

ಯಾವುದೇ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಠೇವಣಿ ಇರಿಸಲು ಪಾನ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಜಾರಿಗೆ ಪಾನ್ ಕಾರ್ಡ್ ನೀಡಬೇಕು. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ 25 ಸಾವಿರ ರೂಪಾಯಿಗಿಂತ ಹೆಚ್ಚಿನ ಬಿಲ್‌ಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ.

ಜೀವ ವಿಮಾ ಪ್ರೀಮಿಯಂ  ಠೇವಣಿ ಮೊತ್ತ 50,000 ರೂಪಾಯಿಗಿಂತ ಹೆಚ್ಚಿದ್ದರೆ ಪಾನ್ ಸಂಖ್ಯೆ ನೀಡಬೇಕು. ಯಾವುದೇ ಕಂಪನಿಯ ಷೇರುಗಳನ್ನು ಖರೀದಿಸಲು ಪಾನ್ ಕಾರ್ಡ್ ಸಹ ಅಗತ್ಯವಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...