alex Certify ಬ್ಯಾಂಕ್​ ಸಾಲ ಪಾವತಿದಾರರಿಗೆ RBI ನಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್​ ಸಾಲ ಪಾವತಿದಾರರಿಗೆ RBI ನಿಂದ ಮಹತ್ವದ ಮಾಹಿತಿ

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಸಾಲ ಮರುಪಾವತಿ ವಿನಾಯಿತಿ ನೀಡಿದ್ದ ಆರ್​ಬಿಐ ಇದೀಗ ಮಹತ್ವದ ಸೂಚನೆಯೊಂದನ್ನ ಹೊರಡಿಸಿದೆ. ಇದರನ್ವಯ ಮಾರ್ಚ್​ 1ರವರೆಗೆ ಯಾರು ನಿಗದಿತ ಸಮಯಕ್ಕೆ ಬಡ್ಡಿ ಕಟ್ಟಿರುತ್ತಿರೋ ಅಂತಹ ಗ್ರಾಹಕರು ಮೊರಟೋರಿಯಂಗೆ ಸಂಪೂರ್ಣವಾಗಿ ಅರ್ಹರು ಎಂದು ಹೇಳಿದೆ.

6 ಆಗಸ್ಟ್​ವರೆಗೆ ನೀಡಲಾಗಿರೋ ಇಎಂಐ ವಿನಾಯಿತಿ ಕುರಿತಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಆರ್​ಬಿಐ, ಮಾರ್ಚ್ 1ರವರೆಗೆ ಯಾವುದೇ ಅಡಚಣೆಗಳಿಲ್ಲದೇ ಪ್ರಮಾಣಿತವಾಗಿ ಉಳಿದಿರುವ ಸಾಲಗಳು ಮಾತ್ರ ಈ ವಿನಾಯತಿಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ಆಗಸ್ಟ್​8ರ ಸುತ್ತೋಲೆಗೆ ಸಂಬಧಿಸಿದಂತೆ ಸಾಲಗಾರರನ್ನ ವರ್ಗೀಕರಣ ಮಾಡುವಂತೆ ಆರ್​ಬಿಐ ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ. ಇದರನ್ವಯ ಪ್ರಮಾಣಿತ ಎಂದು ವರ್ಗೀಕರಿಸಲ್ಪಟ್ಟ ಅರ್ಹ ಸಾಲಗಾರರು ಮಾತ್ರ ಈ ಸೌಲಭ್ಯಕ್ಕೆ ಭಾಜನರಾಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...