ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಸಾಲ ಮರುಪಾವತಿ ವಿನಾಯಿತಿ ನೀಡಿದ್ದ ಆರ್ಬಿಐ ಇದೀಗ ಮಹತ್ವದ ಸೂಚನೆಯೊಂದನ್ನ ಹೊರಡಿಸಿದೆ. ಇದರನ್ವಯ ಮಾರ್ಚ್ 1ರವರೆಗೆ ಯಾರು ನಿಗದಿತ ಸಮಯಕ್ಕೆ ಬಡ್ಡಿ ಕಟ್ಟಿರುತ್ತಿರೋ ಅಂತಹ ಗ್ರಾಹಕರು ಮೊರಟೋರಿಯಂಗೆ ಸಂಪೂರ್ಣವಾಗಿ ಅರ್ಹರು ಎಂದು ಹೇಳಿದೆ.
6 ಆಗಸ್ಟ್ವರೆಗೆ ನೀಡಲಾಗಿರೋ ಇಎಂಐ ವಿನಾಯಿತಿ ಕುರಿತಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಆರ್ಬಿಐ, ಮಾರ್ಚ್ 1ರವರೆಗೆ ಯಾವುದೇ ಅಡಚಣೆಗಳಿಲ್ಲದೇ ಪ್ರಮಾಣಿತವಾಗಿ ಉಳಿದಿರುವ ಸಾಲಗಳು ಮಾತ್ರ ಈ ವಿನಾಯತಿಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.
ಆಗಸ್ಟ್8ರ ಸುತ್ತೋಲೆಗೆ ಸಂಬಧಿಸಿದಂತೆ ಸಾಲಗಾರರನ್ನ ವರ್ಗೀಕರಣ ಮಾಡುವಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ. ಇದರನ್ವಯ ಪ್ರಮಾಣಿತ ಎಂದು ವರ್ಗೀಕರಿಸಲ್ಪಟ್ಟ ಅರ್ಹ ಸಾಲಗಾರರು ಮಾತ್ರ ಈ ಸೌಲಭ್ಯಕ್ಕೆ ಭಾಜನರಾಗಲಿದ್ದಾರೆ.