alex Certify ಮನೆಯಲ್ಲೇ ಕುಳಿತು ಈ ‘ವೆಬ್ ಸೈಟ್’ ಮೂಲಕ ಕೈ ತುಂಬಾ ಗಳಿಸಿ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ಈ ‘ವೆಬ್ ಸೈಟ್’ ಮೂಲಕ ಕೈ ತುಂಬಾ ಗಳಿಸಿ ಹಣ

ಇಂದಿನ ದಿನಗಳಲ್ಲಿ ಕೆಲಸ ಸಿಗೋದು ಸುಲಭದ ಮಾತಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುವುದಿಲ್ಲ. ಕಚೇರಿಗೆ ಹೋಗಿ ಕೆಲಸ ಮಾಡುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಜೊತೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಕಾರಣ ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಂತವರು ಮನೆಯಲ್ಲಿಯೇ ಕುಳಿತು ಕೈತುಂಬ ಸಂಬಳ ಪಡೆಯಲು ಆನ್ಲೈನ್ ನಲ್ಲಿ ಸಾಕಷ್ಟು ಅವಕಾಶಗಳಿವೆ.

ನಿಮಗೆ ವೆಬ್ ಡಿಸೈನ್, ಫ್ರೀಲಾನ್ಸರ್ ಮತ್ತು ವರ್ಡ್‌ ಪ್ರೆಸ್‌ ನಲ್ಲಿ ಆಸಕ್ತಿಯಿದ್ದರೆ ಗಂಟೆಗೆ 300 ರೂಪಾಯಿಯಂತೆ ನೀವು ಹಣ ಗಳಿಸಬಹುದು. https://www.odesk.com ನಲ್ಲಿ ನಿಮಗೆ ಸಾಕಷ್ಟು ಅವಕಾಶಗಳು ಸಿಗ್ತವೆ. ಈ ವೆಬ್ ಸೈಟ್, ಸಣ್ಣ ಪುಟ್ಟ ಡೆವಲಪರ್ಸ್ ಹಾಗೂ ಫ್ರೀಲಾನ್ಸರ್ ಒಂದುಗೂಡಿಸುವ ಕೆಲಸ ಮಾಡುತ್ತದೆ. ಇಲ್ಲಿ ಕೆಲಸ ಮಾಡಿ ತಿಂಗಳಿಗೆ 50-60 ಸಾವಿರದವರೆಗೆ ಗಳಿಸಬಹುದು.

ಸ್ಕ್ರಿಪ್ಟ್ ಬರೆಯುವ ಹವ್ಯಾಸ ನಿಮಗಿದ್ದರೆ https://www.scripted.com/ ಗೆ ಲಾಗಿನ್ ಆಗಬಹುದು. ಈ ವೆಬ್ ಸೈಟ್ ಫ್ರೀಲಾನ್ಸರ್ ಸ್ಕ್ರಿಪ್ಟ್ ರೈಟರ್ ಗಳಿಗೆ ಒಳ್ಳೆ ಅವಕಾಶ ನೀಡುತ್ತದೆ. ಇಂಗ್ಲೀಷ್ ನಲ್ಲಿ ಹಿಡಿತವಿದ್ರೆ ಕೈತುಂಬ ಸಂಪಾದನೆ ನಿಶ್ಚಿತ.

ಮನೆಯಲ್ಲೇ ಕುಳಿತು ಕೆಲಸ ಮಾಡಲು https://www.elance.com/ ಈ ವೆಬ್ ಸೈಟ್ ಕೂಡ ಬೆಸ್ಟ್. ಇದ್ರಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ. 180 ದೇಶಗಳಲ್ಲಿ ಈ ವೆಬ್ ಸೈಟ್ ಕೆಲಸ ಮಾಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...