alex Certify ಈರುಳ್ಳಿ ಬೆಳೆಗಾರರಿಗೆ ಬಿಗ್ ಶಾಕ್: ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿದ್ದ ಈರುಳ್ಳಿ ಕೆಜಿಗೆ ಕೇವಲ 1 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಬೆಳೆಗಾರರಿಗೆ ಬಿಗ್ ಶಾಕ್: ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿದ್ದ ಈರುಳ್ಳಿ ಕೆಜಿಗೆ ಕೇವಲ 1 ರೂ.

ಬೆಂಗಳೂರು: ಹಿಂದಿನ ವರ್ಷಗಳಲ್ಲಿ ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿದ್ದ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

ಕೊಳೆ ರೋಗದಿಂದಾಗಿ ಈರುಳ್ಳಿ ಬೆಳೆ ಕಡಿಮೆಯಾಗಿದೆ. ಬಹುತೇಕ  ಭಾಗದಲ್ಲಿ ಬಂದಿರುವ ಫಸಲು ಗುಣಮಟ್ಟ ಕುಸಿತದಿಂದ ದರ ಕೂಡ ಕಡಿಮೆಯಾಗಿದೆ. ಸಣ್ಣ ಗಾತ್ರದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ಕೆಜಿಗೆ ಒಂದು ರೂಪಾಯಿ ದರ ಇದೆ.

ಬೆಲೆ ಸಿಗದೆ ಕಂಗಾಲಾದ ರೈತರು ಈರುಳ್ಳಿಯನ್ನು ರಸ್ತೆ, ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಹೊಲದಲ್ಲೇ ಬೆಳೆ ಬಿಟ್ಟಿದ್ದಾರೆ. ಕೊಳೆರೋಗದಿಂದ ಈರುಳ್ಳಿ ಗಾತ್ರ ಸಣ್ಣದಾಗಿದೆ. ಮಾರುಕಟ್ಟೆಯಲ್ಲಿ ಇಂತಹ ಈರುಳ್ಳಿಗೆ ಬೇಡಿಕೆ ಇಲ್ಲದಂತಾಗಿದ್ದು, ರೈತರಿಗೆ ದರ ಕುಸಿತ ಶಾಕ್ ನೀಡಿದೆ. ಆದರೆ, ದೊಡ್ಡ ಗಾತ್ರದ ಈರುಳ್ಳಿ ದರ ಕಡಿಮೆಯಾಗಿಲ್ಲ. ಗ್ರಾಹಕರಿಗೆ ಹಿಂದಿನ ದರಗಳಲ್ಲಿಯೇ ಈರುಳ್ಳಿ ಮಾರಾಟವಾಗುತ್ತಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...