alex Certify ಇಲ್ಲಿದೆ ‘ಒನ್ ಪ್ಲಸ್’ ಬ್ಯಾಂಡ್ ಕುರಿತ ವಿಶೇಷತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ‘ಒನ್ ಪ್ಲಸ್’ ಬ್ಯಾಂಡ್ ಕುರಿತ ವಿಶೇಷತೆ…!

ಸ್ಮಾರ್ಟ್​ ಬ್ಯಾಂಡ್​​ನ ವಿಚಾರಕ್ಕೆ ಬಂದ್ರೆ ನಮಗೆ ಆಯ್ಕೆಗಳು ಸಿಗೋದು ಬಹಳ ಕಡಿಮೆ. ಆದರೆ ಕ್ಸಿಯೋಮಿ ಬ್ರ್ಯಾಂಡ್​ ಈಗಾಗಲೇ ಸ್ಮಾರ್ಟ್​ ಬ್ಯಾಂಡ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾದ ಎಂಐ ಬ್ಯಾಂಡ್​, ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇತ್ತ ಒನ್​ ಪ್ಲಸ್​ ಸ್ಮಾರ್ಟ್​ ಬ್ಯಾಂಡ್​ಗಳೂ ಕೂಡ ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನ ಗಳಿಸಿವೆ. 2499 ರೂಪಾಯಿ ಮೌಲ್ಯದ ಒನ್​ ಪ್ಲಸ್​ ಬ್ಯಾಂಡ್​​ ತನ್ನ ಔಟ್​ ಲುಕ್​ ಹಾಗೂ ಆಯ್ಕೆಗಳ ಮೂಲಕ ಗ್ರಾಹಕರಿಗೆ ನಿರಾಶೆ ಉಂಟು ಮಾಡೋದೇ ಇಲ್ಲ.

ಸ್ಮಾರ್ಟ್​ ಬ್ಯಾಂಡ್​ಗಳು ಅಂದರೆ ಸಾಕು. ಸಾಮಾನ್ಯವಾಗಿ ಎಲ್ಲಾ ಕಂಪನಿಗಳು ಒಂದೇ ಆಕಾರದ ಬ್ಯಾಂಡ್​ಗಳನ್ನ ಮಾರುಕಟ್ಟೆಗೆ ಬಿಟ್ಟಿವೆ. ಅದೇ ಉದ್ದದ ಡಿಸಪ್ಲೇ ಹಾಗೂ ರಬ್ಬರ್​ ಬ್ಯಾಂಡ್​​ಗಳು ಎಲ್ಲಾ ಕಂಪನಿಯ ಸ್ಮಾರ್ಟ್​ ಬ್ಯಾಂಡ್​ಗಳ ಸಾಮಾನ್ಯ ಶೈಲಿಯಾಗಿದೆ. ಆದರೆ ಒನ್​ ಪ್ಲಸ್​ ಮಾತ್ರ ಕೊಂಚ ಅಗಲವಾದ ಡಿಸಪ್ಲೇ ಇಡುವ ಮೂಲಕ ವಿಶೇಷವಾಗಿ ಬ್ಯಾಂಡ್​ ತಯಾರಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...