ಸ್ಮಾರ್ಟ್‌ಫೋನ್ ಕಂಪನಿ ಒನ್‌ಪ್ಲಸ್‌ನ ಪ್ರಮುಖ ಸಾಧನವಾದ ಒನ್‌ಪ್ಲಸ್ 8 ಪ್ರೊ ಈಗಾಗಲೇ ಬಿಡುಗಡೆಯಾಗಿದೆ. ಆದ್ರೆ ಅದು ವಿಶಿಷ್ಟ್ಯಕ್ಯಾಮರಾ ಹೊಂದಿದ್ದ ಕಾರಣ ಅದನ್ನು ನಿಷೇಧಿಸಲಾಗಿದೆ. ಒನ್‌ಪ್ಲಸ್ ಕ್ಯಾಮೆರಾದಲ್ಲಿನ ಫೋಟೊಕ್ರೋಮ್ ಸಂವೇದಕವು ತೆಳುವಾದ ಪ್ಲಾಸ್ಟಿಕ್ ಮತ್ತು ಕೆಲವು ಬಟ್ಟೆಗಳ ಅಡಿಯಿಟ್ಟರೂ ಫೋಟೋ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿತ್ತು.
ಕ್ಯಾಮೆರಾದ ಈ ಎಕ್ಸರೆ ವೈಶಿಷ್ಟ್ಯವನ್ನು ಅನೇಕ ಬಳಕೆದಾರರು ಖಂಡಿಸಿದ್ದರು. ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈಗ ಈ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಂಪನಿ ಸಾಫ್ಟ್ ವೇರ್ ಅಪ್ಡೇಟ್ ಮಾಡಿದೆ. ಇದ್ರಿಂದಾಗಿ ಬಟ್ಟೆ ಅಡಿಯಿಂದ ಫೋಟೋ ಸೆರೆ ಹಿಡಿಯಲು ಸಾಧ್ಯವಿಲ್ಲ.
ಒನ್ ಪ್ಲಸ್ ಕ್ಯಾಮರಾ ವೈಶಿಷ್ಟ್ಯ ವನ್ನು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದರು. ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.